ಡಾ.ಎಂ.ಪಿ.ಕರ್ಕಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಂಸದರು, ಶಾಸಕರು, ಅಭಿಮಾನಿಗಳು

ಹೊನ್ನಾವರ: ಪಟ್ಟಣದ ಎಸ್ ಡಿ ಎಂ ಕಾಲೇಜು ಆವರಣದಲ್ಲಿ ಮಂಗಳವಾರ ನೂರಾರು ಜನರು ಆಗಮಿಸಿ ಮಾಜಿ ಶಾಸಕ ಉತ್ತರ ಕನ್ನಡ ಧೀಮಂತ ರಾಜಕಾರಣಿ ಡಾ. ಎಂ.ಪಿ.ಕರ್ಕಿ ಅವರ ಅಂತಿಮ ದರ್ಶನ ಪಡೆದರು.
ಮಂಗಳವಾರ ಬೆಳಗ್ಗೆ 8-30 ರಿಂದ 10-30ರ ವರೆಗೆ ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ,ಡಾ.ಜಿ.ಜಿ.ಹೆಗಡೆ,  ಶಿವಾನಂದ ಹೆಗಡೆ, ವಿನೋದ ಪ್ರಭು, ಸೂರಜ್ ನಾಯ್ಕ ಸೋನಿ, ಶಿವಾನಿ ಶಾಂತಾರಾಮ, ಎಂ.ಜಿ.ನಾಯ್ಕ, ಉಮೇಶ ನಾಯ್ಕ, ರಾಜೇಶ ಭಂಡಾರಿ, ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ ಮಾವಿನಹೊಳೆ, ಡಾ. ಆಶಿಕ್ ಹೆಗ್ಡೆ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಅಭಿಮಾನಿಗಳು ಅಂತಿಮ ದರ್ಶನ ಪಡೆದರು.
ನಂತರ ಮೃತದೇಹವನ್ನು ಮನೆಗೆ ತರಲಾಯಿತು. ಪಟ್ಟಣದ ಬಂದರ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿದೆ ಅಗ್ನಿಸ್ಪರ್ಷ ಮಾಡಲಾಯಿತು. ನೂರಾರು ಜನರು ಪಾಲ್ಗೊಂಡಿದ್ದರು

ಡಾ.ಕರ್ಕಿ ಕಾರವಾರ ಜೈಲಿನಲ್ಲಿದ್ದಾಗ ಸ್ವಾರಸ್ಯಕರ ಘಟನೆ…
ಆಗ ಜನಸಂಘದಲ್ಲಿದ್ದ (ಈಗ ಬಿಜೆಪಿ) ಡಾ.ಎಂ.ಪಿ,ಕರ್ಕಿ ಅವರು ತುರ್ತು ಪರಿಸ್ಥಿತಿ ವಿರೋಧಿಸಿದ ಕಾರಣಕ್ಕೆ ಅವರನ್ನು ಜೈಲಿನಲ್ಲಿ ಇಡಲಾಗಿತ್ತು. ಅವರು ಹಾಗೂ ಅವರ ಜೊತೆ ಇತರ ೩೫-೪೦ರಷ್ಟು ಜನರನ್ನು ಕಾರವಾರ ಜೈಲಿನಲ್ಲಿ ಇರಿಸಲಾಗಿತ್ತು. ಅವರು ಸುಮಾರು ೨೦-೨೫ ದಿನಗಳ ಕಾಲ ಜೈಲಿನಲ್ಲಿದ್ದರು.
ಆ ಸಮಯದಲ್ಲಿ ಜೈಲು ಅಧಿಕಾರಿ ಪತ್ನಿ ಖಾಯಿಲೆ ಬಿದ್ದರು. ಅವರಿಗೆ ವಿಪರೀತ ಡಿಸೆಂಟ್ರಿ (lose motion) ಶುರುವಾಗಿ ವಿಪರೀತ ಮಟ್ಟಕ್ಕೆ ಹೋಗಿತ್ತು. ಆ ಜೈಲು ಅಧಿಕಾರಿಗೂ ಡಾ.ಕರ್ಕಿಯವರು ವೈದ್ಯರು ಎಂಬುದು ಗೊತ್ತಿತ್ತು. ಆದರೆ ಅವರ ಬಳಿ ಕೇಳಲು ಬಿಗಿಮಾನ, ಹೀಗಾಘಗಿ ಕಾರವಾರದ ಅನೇಕ ವೈದ್ಯರ ಬಳಿ ತೋರಿಸಲಾಯಿತು. ಆದರೆ ಕಡಿಮೆಯಾಗಲಿಲ್ಲ. ಆಗ ಅನಿವಾರ್ಯವಾಗಿ ಡಾ.ಕರ್ಕಿ ಅವರ ಬಳಿ ಬರಬೇಕಾಯಿತು. ಡಾ.ಕರ್ಕಿ ಅವರು ಔಷಧೋಪಚಾರ ಮಾಡಿದ ಎರಡೇ ದಿನದಲ್ಲಿ ರೋಗಿ ಸಂಪೂರ್ಣ ಗುಣಮುಖರಾದರು. ನಂತರ ಡಾಕ್ಟ್ರು ಜೈಲಿನಲ್ಲಿದ್ದಷ್ಟು ಕಾಲ ಅವರಿಗೆ ಹಾಗೂ ಅವರ ಜೊತೆ ಇದ್ದವರಿಗೆ ಜೈಲಿನಲ್ಲಿ ಯಾವುದೇ ನಿರ್ಬಂಧ ಇರಲಿಲ್ಲವಂತೆ. ಹೀಗೆಂದು ಡಾ.ಕರ್ಕಿ ಅವರ ಅಕ್ಕನ ಮಗಳು ವಿದ್ಯಾ ಭಟ್‌ ನೆನಪಿಸಿಕೊಂಡಿದ್ದಾರೆ. ಶಿಸ್ತು, ಬದ್ಧತೆ ಹಾಗೂ ಪ್ರಮಾಣಿಕತೆಯೇ ಕರ್ಕಿ ಡಾಕ್ಟ್ರ ಶಕ್ತಿಯಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement