ರಜೌರಿ : 16 ಕಾರ್ಪ್ಸ್ ಪಡೆಗಳು ರಜೌರಿ ಸೆಕ್ಟರಿನ ದಟ್ಟ ಕಾಡಿನಲ್ಲಿ ನಡೆಯುತ್ತಿರುವ ಎನ್ ಕೌಂಟರ್ನಲ್ಲಿ(encounter) ಪಾಕಿಸ್ತಾನ ಮೂಲದ ಲಷ್ಕರ-ಎ-ತೊಯ್ಬಾ (Lashkar e Toiba)ಕ್ಕೆ ಸೇರಿದ ಆರು ಭಯೋತ್ಪಾದಕರನ್ನು ಭಾರತೀಯ ಸೇನೆ ಗುಂಡಿಕ್ಕಿ ಕೊಂದಿದೆ.
ಉಳಿದ ಮೂರರಿಂದ ನಾಲ್ಕು ಇಸ್ಲಾಮಿಕ್ ಜಿಹಾದಿಗಳಿಗಾಗಿ ಶೋಧ ನಡೆದಿದೆ.
ರಜೌರಿ ಕಾಡಿನಲ್ಲಿ ಭಯೋತ್ಪಾದಕರನ್ನು ಹಿಡಿಯುವ ಪ್ರಯತ್ನದಲ್ಲಿ ಭಾರತೀಯ ಸೇನೆ ಒಂಬತ್ತು ಜನರನ್ನು ಕಳೆದುಕೊಂಡ ನಂತರ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಜನರಲ್ ಬಿಪಿನ್ ರಾವತ್ ಅವರು ಅಕ್ಟೋಬರ್ 16ರಂದು ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಭಾರತೀಯ ಸೇನಾ ಕಮಾಂಡರ್ ಗಳಿಗೆ ಭಯೋತ್ಪಾದಕರನ್ನು ಅವರ ಷರತ್ತುಗಳ ಮೇಲೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಬದಲು ಕಾರ್ಯಾಚರಣೆ ನಡೆಸಿ ಅವರನ್ನು ಆಯಾಸಗೊಳಿಸಲು ಹೇಳಲಾಯಿತು ಎಂದು ಹೇಳಲಾಗುತ್ತಿದೆ.
ಸೌತ್ ಬ್ಲಾಕ್ ಪ್ರಕಾರ, ಕಳೆದ ಎರಡು ಮೂರು ತಿಂಗಳಲ್ಲಿ ಪಾಕಿಸ್ತಾನದಿಂದ ರಜೌರಿ-ಪೂಂಚ್ ಜಿಲ್ಲೆಯ ಗಡಿಗಳ ನಡುವಿನ ಕಾಡುಗಳ ಕಡೆಗೆ ಒಂಬತ್ತರಿಂದ 10 ಎಲ್ ಇಟಿ ಭಯೋತ್ಪಾದಕರು ನುಸುಳಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತು ಬೇಲಿಯ ಉದ್ದಕ್ಕೂ ಅನೇಕ ಒಳನುಸುಳುವಿಕೆ ಬಿಡ್ ಗಳನ್ನು ವಿಫಲಗೊಳಿಸಲಾಗಿದ್ದರೂ, ಪಾಕಿಸ್ತಾನ ಇವರನ್ನು ಒಳನುಸುಳಲು ಯತ್ನಿಸುತ್ತಿದೆ.
ಭಾರತೀಯ ಸೇನೆ ಹಾಗೂ ಭಯೋತ್ಪಾದನಾ ನಿಗ್ರಹ ಪಡೆಗಳು ಉಳಿದಿರುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವುದು ಸಮಯದ ವಿಷಯವಾಗಿದ್ದರೂ, ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳು ಬಿಟ್ಟಿರುವ ಶಸ್ತ್ರಾಸ್ತ್ರಗಳು ಮತ್ತು ರಾತ್ರಿ ಸಮಯದಲ್ಲಿ ಕಣ್ಗಾವಲು ಮಾಡುವ ಸಾಧನಗಳು ಭಯೋತ್ಪಾದಕರ ಕೈಸೇರಿ ಕಾಶ್ಮೀರದಲ್ಲಿ ಹಿಂಸಾಚಾರದ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಸೇನೆ ಕಟ್ಟೆಚ್ಚರ ವಹಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ