ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾಕ್ಕೆ 1 ಕೋಟಿ ರೂಪಾಯಿ ದಂಡ ವಿಧಿಸಿದ ಆರ್​ಬಿಐ

ಮುಂಬೈ: ಕೆಲವು ನಿರ್ದೇಶನಗಳನ್ನು ಪಾಲನೆ ಮಾಡದಿದ್ದಕ್ಕಾಗಿ ಅಕ್ಟೋಬರ್ 18ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಗೆ ಒಂದು ಕೋಟಿ ರೂ.ಗಳ ದಂಡ ವಿಧಿಸಿದೆ.
ವಾಣಿಜ್ಯ ಬ್ಯಾಂಕ್​ಗಳು ಮತ್ತು ಆಯ್ದ ಹಣಕಾಸು ಸಂಸ್ಥೆಗಳ ವಂಚನೆಗಳ ವರ್ಗೀಕರಣ ಮತ್ತು ವರದಿ ಮಾಡುವುದಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರ್‌ಬಿಐ ಹೇಳಿದೆ. ನಿಯಂತ್ರಕ ಸಂಸ್ಥೆಯ ನಿಯಮಾವಳಿಗಳನ್ನು ಅನುಸರಿಸದ ಆಧಾರದ ಮೇಲೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವಕ್ಕೆ ಇದು ಸಂಬಂಧಿಸಿದ್ದಲ್ಲ ಎಂದು ಕೇಂದ್ರ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಯಾಂಕ್​ನಲ್ಲಿ ನಿರ್ವಹಿಸಲಾದ ಗ್ರಾಹಕರ ಖಾತೆಯನ್ನು ಆರ್‌ಬಿಐ ಪರಿಶೀಲನೆ ನಡೆಸಿದ್ದು, ಖಾತೆಯಲ್ಲಿನ ವಂಚನೆಯ ವರದಿಯಲ್ಲಿ ನಿರ್ದೇಶನಗಳನ್ನು ಅನುಸರಿಸದಿರುವುದು ಬಹಿರಂಗವಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.ಬ್ಯಾಂಕ್‌ಗೆ ಈ ಬಗ್ಗೆ ಸೂಚನೆಯನ್ನು ನೀಡಲಾಗಿದ್ದು, ಸೂಚಿಸಿದ ನಿರ್ದೇಶನಗಳನ್ನು ಪಾಲಿಸದ ಕಾರಣಕ್ಕಾಗಿ ದಂಡವನ್ನು ಏಕೆ ವಿಧಿಸಬಾರದು ಎಂಬುದನ್ನು ತಿಳಿಸುವಂತೆ ನೋಟಿಸ್​ ನೀಡಲಾಯಿತು. ಎಸ್‌ಬಿಐನ ಉತ್ತರವನ್ನು ಪರಿಗಣಿಸಿದ ನಂತರ, ಈ ಮೇಲಿನ ಆರ್‌ಬಿಐ ನಿರ್ದೇಶನಗಳ ಅನುಸರಿಸದಿರುವ ಆರೋಪವು ದೃಢೀಕೃತವಾಗಿದೆ ಮತ್ತು ವಿತ್ತೀಯ ದಂಡವನ್ನು ವಿಧಿಸುವುದು ಸಮರ್ಥನೆಯಾಗಿದೆ ಎಂದು ತೀರ್ಮಾನಿಸಿತು ಎಂಬುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ : ಪಾಕಿಸ್ತಾನದ ವಾಯುನೆಲೆಗಳ ಮೇಲಿನ ದಾಳಿಯಲ್ಲಿ 20% ಮೂಲಸೌಕರ್ಯ; ಹಲವಾರು ಯುದ್ಧ ವಿಮಾನಗಳು ನಾಶ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement