ಭಟ್ಕಳ: ಅಕಸ್ಮಾತ್‌ ವಿದ್ಯುತ್ ತಂತಿ ತಗುಲಿ ರೈತ ಸಾವು

ಭಟ್ಕಳ: ತೋಟದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದ ವೇಳೆ ಅಕಸ್ಮಾತ್‌ ಆಗಿ ವಿದ್ಯುತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾರುಕೇರಿಯ ಹೂತ್ಕಲದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ನಾಗೇಶ ಮಂಜಯ್ಯ ಭಟ್(48) ಎಂದು ಗುರುತಿಸಲಾಗಿದೆ. ಈತ ಮನೆಯ ಮುಂದಿನ ತೋಟದಲ್ಲಿ ಕೊಕ್ಕೆಯನ್ನು ಕೈಯಲ್ಲಿ ಹಿಡಿದು ಹೀರೆಕಾಯಿ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕೈಯಲ್ಲಿದ್ದ ಕೊಕ್ಕೆ ವಿದ್ಯುತ್ ತಂತಿಗೆ ತಗುಲಿ ಕೊಕ್ಕೆಯ ಮುಖಾಂತರ ವ್ಯಕ್ತಿಗೆ ವಿದ್ಯುತ್ ಪ್ರವಹಿಸಿದೆ. ಪರಿಣಾವಾಗಿ ಈ ಅವಘಡ ಸಂಭವಿಸಿದೆ. ವಿದ್ಯುತ್ ಪ್ರವಹಿಸುತ್ತಿದ್ದಂತೆ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ನಂತರ ನೋಡಿದವರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 / 5. 1

ಪ್ರಮುಖ ಸುದ್ದಿ :-   ಮುಖ್ಯ ಕಾರ್ಯದರ್ಶಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಎಂಎಲ್‌ಸಿ ಎನ್‌.ರವಿಕುಮಾರ ವಿರುದ್ಧ ಎಫ್‌ಐಆರ್‌ ದಾಖಲು

ನಿಮ್ಮ ಕಾಮೆಂಟ್ ಬರೆಯಿರಿ

advertisement