ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಹೊಸ ಪಕ್ಷ ಸ್ಥಾಪನೆಯ ಘೋಷಣೆ ಬೆನ್ನಲ್ಲೇ ಮೈತ್ರಿಗೆ ಸ್ವಾಗತ ಎಂದ ಬಿಜೆಪಿ

ಛತ್ತೀಸ್‌ಗಢ: ಕಾಂಗ್ರೆಸ್‌ನಿಂದ ಹೊರ ಬಂದಿರುವ ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಹೊಸ ಪಕ್ಷವನ್ನು ರಚನೆ ಮಾಡುವುದಾಗಿ ಮಂಗಳವಾರ ಘೋಷಣೆ ಮಾಡಿದ್ದಾರೆ. ಈ ನಡುವೆ ಬಿಜೆಪಿ ಬುಧವಾರ, “ಯಾರಿಗೆ ದೇಶ ಮುಖ್ಯವೋ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ,” ಎಂದು ಪರೋಕ್ಷವಾಗಿ ಮೈತ್ರಿಗೆ ಆಹ್ವಾನ ನೀಡಿದೆ.
ಅಮರಿಂದರ್‌ ಸಿಂಗ್‌ ಮಂಗಳವಾರ ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡಿದ್ದರು. ಹಾಗೆಯೇ ರೈತರ ಸಮಸ್ಯೆ ಬಗೆಹರಿದರೆ, ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಈ ಬೆನ್ನಲ್ಲೇ ಬುಧವಾರ ಬಿಜೆಪಿ ಮೈತ್ರಿಗೆ ಸ್ವಾಗತ ಎಂದಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಪಂಜಾಬ್‌ ಬಿಜೆಪಿ ಉಸ್ತುವಾರಿ ದುಷ್ಯಂತ್‌ ಗೌತಮ್‌, ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರನ್ನು ದೇಶಭಕ್ತ ಎಂದು ಹೊಗಳಿದ್ದಾರೆ. ಜೊತೆಗೆ ಯಾರಿಗೆ ದೇಶದ ಹಿತಾಸಕ್ತಿ ಮುಖ್ಯವೋ ಅವರೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳಲು ನಮ್ಮ ಪಕ್ಷ ಸಿದ್ಧವಾಗಿದೆ,” ಎಂದು ಹೇಳಿದ್ದಾರೆ.
ರೈತರ ವಿಚಾರದಲ್ಲಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ಷರತ್ತಿನ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ, “ಸಿಂಗ್‌ ರೈತರ ಆಂದೋಲನವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡಿಲ್ಲ,” ರೈತರ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ನಾವು ಈ ವಿಚಾರದಲ್ಲಿ ಬದ್ಧವಾಗಿದ್ದೇವೆ ಹಾಗೂ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದೇವೆ. ಸಮಯ ಬಂದಾಗ ನಾವು ಜೊತೆಯಾಗಿ ಕೂತು ರೈತರ ವಿಚಾರವನ್ನು ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ಮುಖ್ಯ ಸಿದ್ಧಾಂತ ರಾಷ್ಟ್ರೀಯತೆ ಹಾಗೂ ರಾಷ್ಟ್ರವನ್ನು ಎಂದಿಗೂ ಮೊದಲ ಸ್ಥಾನದಲ್ಲಿ ಇರಿಸುವುದಕ್ಕೆ ನಮ್ಮ ಆದ್ಯತೆ. ಈ ಸಿದ್ಧಾಂತದ ಪ್ರಕಾರ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಲು ಯಾರು ಸಿದ್ಧವೋ ಅವರಿಗೆ ಸ್ವಾಗತ,” ಎಂದರು.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement