ದೀಪಾವಳಿಗೆ ಪಟಾಕಿ ಸಿಡಿಸಬಾರದೆಂಬ ಸಿಯೆಟ್ ಜಾಹೀರಾತಿಗೆ ಆಕ್ಷೇಪ:ತಕ್ಷಣ ಹಿಂಪಡೆಯಲು ಕಂಪನಿಗೆ ಪತ್ರ ಬರೆದ ಸಂಸದ ಅನಂತಕುಮಾರ ಹೆಗಡೆ

ಶಿರಸಿ: ನಟ ಅಮೀರ್ ಖಾನ್ ನಟಿಸಿರುವ ಸಿಯೆಟ್ ಬೈಕ್ ಟೈರಿನ ಜಾಹಿರಾತೊಂದರಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಬರುವಂತೆ ಬಿಂಬಿಸಲಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಿಯೆಟ್ ಬೈಕ್ ಟೈರಿನ ಮುಖ್ಯಸ್ಥರಿಗೆ ಪತ್ರ ಬರೆದಿರುವ ಸಂಸದ ಹೆಗಡೆ, ಪಟಾಕಿಗಳನ್ನು ರಸ್ತೆ ಮೇಲೆ ಹೊಡೆಯುವುದರಿಂದ ಟ್ರಾಫಿಕ್‌ ಸಮಸ್ಯೆ ಹಾಗೂ ವಾಐಉ ಮಾಲಿನ್ಯದ ಸಮಸ್ಯೆ ಆಗುತ್ತದೆ ಎಂದಾದರೆ ರಸ್ತೆ ಮೇಲೆ ನಮಾಜು ಮಾಡುವುದರಿಂದಲೂ ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ. ಪ್ರತಿನಿತ್ಯ ಆಝಾನ್ ಕೂಗುವುದರಿಂದ ಶಬ್ದ ಮಾಲಿನ್ಯವಾಗುತ್ತದೆ. ಆ ಕುರಿತಾಗಿಯೂ ತಾವು ತಮ್ಮ ಜಾಹಿರಾತಿನಲ್ಲಿ ತೋರಿಸಿ ಎಂದು ಸಂಸದ ಹೆಗಡೆ ಹೇಳಿದ್ದಾರೆ.

ಜೊತೆಗೆ ಈ ಕೂಡಲೇ ಸಿಯೆಟ್‌ ತನ್ನ ಜಾಹೀರಾತನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಅಮೀರ್ ಖಾನ್ ಅಭಿನಯಿಸಿರುವ ಜಾಹೀರಾತು ಒಂದರಲ್ಲಿ ದೀಪಾವಳಿ ಹಬ್ಬದಲ್ಲಿ ಹಿಂದುಗಳಿಗೆ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ. ಆದರೆ
ಪ್ರತಿದಿನ ಬೆಳಗ್ಗೆ ಚೀರುವ ಧ್ವನಿವರ್ಧಕಗಳು, ರಸ್ತೆಗಳ ಮಧ್ಯದಲ್ಲಿ ನಮಾಜ್ ಮಾಡುವುದು ಇನ್ನು ಎಷ್ಟೋ ಆಚರಣೆಗಳು ಅಮೀರ್ ಖಾನ್ ಗಮನ ಹರಿಸಿದರೆ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಈ ರೀತಿಯ ಜಾಹೀರಾತುಗಳು ಹಿಂದುಗಳ ಭಾವನೆಗಳನ್ನು ತುಳಿಯಲು ಮಾಡಿದ ಕುತಂತ್ರ.. ಅಂತೆಯೇ ಭಾರತದಲ್ಲಿ ಇಂತಹ ಹಿಂದೂ ವಿರೋಧಿ ನಟರಿಗೇನು ಕಮ್ಮಿಯಿಲ್ಲ.ಎಂದು ಹೇಳಿರುವ ಅವರು,  ತಕ್ಷಣವೇ ಜಾಹೀರಾತನ್ನು ಹಿಂಪಡೆಯಬೇಕು ಹಾಗೂ ಹಿಂದೂಗಳೇ ಆಗಿರುವ ಅವರು ಹಿಂದುಗಳ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ಅವರು ಗೋಯೆಂಕಾ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಎಇಇ 40 ದಿನಗಳ ನಂತರ ಮುಂಬೈನಲ್ಲಿ ಪತ್ತೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement