ಬಾಲಿವುಡ್‌ ನಟ ಶಾರುಖ್​ ಪುತ್ರ ಆರ್ಯನ್​ ಖಾನ್​ಗೆ ಜಾಮೀನು ನಿರಾಕರಿಸಲು ಕೋರ್ಟ್​ ನೀಡಿದ ಕಾರಣವೇನೆಂದರೆ..

ಮುಂಬೈ: ಕ್ರೂಸ್ ಶಿಪ್​​​ನಲ್ಲಿ ಡ್ರಗ್ಸ್​ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಬಾಲಿವುಡ್​ ತಾರೆ ಶಾರುಖ್​ ಖಾನ್ ಅವರ ಮಗ ಆರ್ಯನ್​ ಖಾನ್​​ನ​ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ಎನ್​ಡಿಪಿಎಸ್​​ ಕೋರ್ಟ್​ ವಜಾಗೊಳಿಸಿದೆ. ಆರ್ಯನ್​ರೊಂದಿಗೆ ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಅರ್ಬಾಜ್​ ಮರ್ಚೆಂಟ್ ಮತ್ತು ಮುನ್​ಮುನ್​ ಧಮೇಚ ಅವರಿಗೂ ಜಾಮೀನು ಸಿಕ್ಕಿಲ್ಲ.
ಆರೋಪಿಯನ್ನು ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುವುದರಿಂದ ಕೋರ್ಟ್ ಆರ್ಯನ್ ಖಾನ್ ಜಾಮೀನು ಅರ್ಜಿ ತಿರಸ್ಕರಿಸಿದೆ
ಆರ್ಯನ್​ ಖಾನ್​ ಜಾಮೀನು ನಿರಾಕರಣೆಗೆ ನ್ಯಾಯಾಧೀಶರು ಕೊಟ್ಟ ಕಾರಣ ಆತನ ವಾಟ್ಸ್​ಆಯಪ್​ ಚಾಟ್​. ಈ ಬಗ್ಗೆ ಉಲ್ಲೇಖಿಸಿರುವ ಮುಂಬೈ ನ್ಯಾಯಾಲಯ, ಆರ್ಯನ್​ ಖಾನ್​ ನಿರಂತರವಾಗಿ ಅಕ್ರಮ ಡ್ರಗ್ಸ್​ ಚಟುವಟಿಕೆಯಲ್ಲಿ ತೊಡಗಿದ್ದ ಎಂಬುದನ್ನು ಆತನ ವಾಟ್ಸ್​ಚಾಟ್​ ಬಹಿರಂಗಪಡಿಸಿದೆ. ಹೀಗಾಗಿ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಜಡ್ಜ್​ ವಿ.ವಿ. ಪಾಟೀಲ್​ ಹೇಳಿದ್ದಾರೆ.
ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರ ಇಬ್ಬರ ಜಾಮೀನು ಅರ್ಜಿಯನ್ನು ವಿಶೇಷ ಮಾದಕದ್ರವ್ಯ ಔಷಧ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ಎನ್‌ಡಿಪಿಎಸ್) ನ್ಯಾಯಾಲಯದ ನ್ಯಾಯಾಧೀಶ ವಿ.ವಿ.ಪಾಟೀಲ್ ಬುಧವಾರ ತಿರಸ್ಕರಿಸಿದ್ದಾರೆ. ಆರ್ಯನ್ ಮತ್ತು ಮುನ್ಮುನ್ ಧಮೇಚಾ, ಅರ್ಬಾಜ್ ಮರ್ಚೆಂಟ್ ಮತ್ತು ಇತರ ಐವರನ್ನು ಅಕ್ಟೋಬರ್ 2 ರಂದು ಎನ್‌ಸಿಬಿ ಬಂಧಿಸಿತು.
18 ಪುಟಗಳ ಆದೇಶದಲ್ಲಿ, ನ್ಯಾಯಾಧೀಶ ಪಾಟೀಲ ಅವರು, ದಾಖಲೆಯಲ್ಲಿರುವ ಸಾಕ್ಷ್ಯ ಪರಿಗಣಿಸಿ, ಅರ್ಜಿದಾರರು ಆರೋಪಿಸಿದ ನಂಬರ್ 1 (ಖಾನ್), 2 (ಮರ್ಚೆಂಟ್) ಮತ್ತು 3 (ಧಮೇಚ) ಅಂತಹ ಅಪರಾಧಕ್ಕೆ ತಪ್ಪಿತಸ್ಥರು ಮತ್ತು ಜಾಮೀನಿನ ಮೇಲೆ ಅವರು ಅಂತಹ ಅಪರಾಧ ಮಾಡುವ ಸಾಧ್ಯತೆ ಇಲ್ಲಎಂದು ನಂಬಲು ಸಮಂಜಸವಾದ ಆಧಾರಗಳಿವೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ, ಅರ್ಜಿದಾರರು/ಆರೋಪಿ ಸಂಖ್ಯೆ 1 ರಿಂದ 3 ರವರೆಗಿನ (ಖಾನ್, ಮರ್ಚೆಂಟ್ ಮತ್ತು ಧಮೇಚಾ) ಒಂದು ಗಂಭೀರ ಅಪರಾಧದ ಒಳಗೊಳ್ಳುವಿಕೆಯನ್ನು ಪರಿಗಣಿಸಿ, ಜಾಮೀನು ನೀಡಲು ಇದು ಸೂಕ್ತವಲ್ಲ” ಎಂದು ಆದೇಶ ನೀಡಿದ್ದಾರೆ.
ವಿಶೇಷ ಎನ್‌ ಡಿಪಿಎಸ್‌ (NDPS) ನ್ಯಾಯಾಲಯವು ಎನ್‌ ಡಿಪಿಎಸ್‌ಕಾಯಿದೆಯ ಸೆಕ್ಷನ್ 29 ಅನ್ವಯವಾಗುತ್ತದೆ ಎಂದು ದಾಖಲಿಸಿದ ಪ್ರೈಮ-ಫೇಸಿಯಲ್ಲಿರುವ ವಸ್ತುವನ್ನು ತೋರಿಸುತ್ತದೆ. ಆದ್ದರಿಂದ, ಎನ್‌ ಡಿಪಿಎಸ್‌ ಕಾಯಿದೆಯ ಸೆಕ್ಷನ್ 37 ರ ಕಠಿಣತೆ ಅನ್ವಯಿಸುತ್ತದೆ. ಆದ್ದರಿಂದ, ಈ ಹಂತದಲ್ಲಿ ಅರ್ಜಿದಾರರು ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಯಾವುದೇ ಅಪರಾಧ ಮಾಡಿಲ್ಲ ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಹೇಳಿದ್ದಾರೆ.
ಡ್ರಗ್ಸ್​ ಪೂರೈಕೆದಾರರ ಜೊತೆಗೆ ಆರ್ಯನ್​ ಖಾನ್​ಗೆ ಸಂಬಂಧ ಇರುವುದು ಕೂಡ ಬಹಿರಂಗವಾಗಿರುವುದು ಜಾಮೀನು ಸಿಗದೇ ಇರುವುದಕ್ಕೆ ಮತ್ತೊಂದು ಕಾರಣವಾಗಿದೆ. ಆರ್ಯನ್​ ಖಾನ್​ ಸ್ನೇಹಿತ ಅರ್ಬಾಜ್​, ತನ್ನ ಶೋನಲ್ಲಿ 6 ಗ್ರಾಂ ಚರಾಸ್​ ಅಡಗಿಸಿಟ್ಟಿದ್ದು ಆರ್ಯನ್​ಗೆ ತಿಳಿದಿತ್ತು ಎಂದು ಕೋರ್ಟ್​ ಹೇಳಿದೆ. ಆರೋಪಿಗೆ ಜಾಮೀನು ನೀಡಿದರೆ, ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಜಾಮೀನು ನಿರಾಕರಿಸಿರುವುದಾಗಿ ಕೋರ್ಟ್​ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಸ್ತುತ ಪ್ರಕರಣದಲ್ಲಿಯೂ ಸಹ, ಆರೋಪಿ ನಂ. 1 (ಆರ್ಯನ್ ಖಾನ್) ನಿಂದ ಯಾವುದೇ ಕಂಟ್ರಾಬ್ಯಾಂಡ್ ಪತ್ತೆಯಾಗಿಲ್ಲ, ಆರೋಪಿ ನಂ. 2 (ಅರ್ಬಾಜ್ ಮರ್ಚೆಂಟ್) ನಿಂದ ಆರು ಗ್ರಾಂ ಚರಗಳು ಪತ್ತೆಯಾಗಿವೆ, ಆರೋಪಿ ನಂ. 1ಗೆ ಈ ಬಗ್ಗೆ ಗೊತ್ತಿತ್ತು. ಆದ್ದರಿಂದ, ಈ ನಿಟ್ಟಿನಲ್ಲಿ ಅರ್ಜಿದಾರರ/ಆರೋಪಿಗಳ ಪರವಾಗಿ ಸಲ್ಲಿಸಲಾದ ಎಲ್ಲಾ ಅಹವಾಲುಗಳನ್ನು ಸ್ವೀಕರಿಸಲಾಗುವುದಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿದೆ.
ಆರ್ಯನ್ ಖಾನ್ ಅವರ ಮೇಲೆ ಯಾವುದೇ ಔಷಧಗಳು ಕಂಡುಬಂದಿಲ್ಲವಾದ್ದರಿಂದ, ಆತ ಯಾವುದೇ ನಿಷೇಧಿತ ವಸ್ತುವನ್ನು ಪ್ರಜ್ಞಾಪೂರ್ವಕವಾಗಿ ಹೊಂದಿಲ್ಲ ಎಂದು ಆರ್ಯನ್ ಖಾನ್ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು.

ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ "ರಾಬರ್ಟ್ ವಾದ್ರಾ ಅಬ್ ಕಿ ಬಾರ್" ಪೋಸ್ಟರ್...!

ಅಕ್ಟೋಬರ್​ 2ನೇ ತಾರೀಕು ಕಾರ್ಡೆಲಿಯ ಕ್ರೂಸ್​ ಶಿಪ್​ ಮೇಲೆ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಆರ್ಯನ್​ ಖಾನ್‌ ವಿಚಾರಣೆ ನಡೆಸಿದ್ದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಅಧಿಕಾರಿಗಳು ​ಅ.3 ರಂದು ಬಂಧಿಸಿದ್ದರು. 23 ವರ್ಷ ವಯಸ್ಸಿನ ಆರ್ಯನ್ ಖಾನ್​ನೊಂದಿಗೆ ಇತರ 9 ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.
ಕಳೆದ 12 ದಿನಗಳಿಂದ ಮುಂಬೈನ ಅರ್ಥರ್​ ರಸ್ತೆ ಜೈಲಿನಲ್ಲಿರುವ ಆರ್ಯನ್‌ ಖಾನ್​ಗೆ ಈ ಮೊದಲು ಮ್ಯಾಜಿಸ್ಟ್ರೇಟ್​ ಕೋರ್ಟ್​ನಿಂದ ಜಾಮೀನು ಲಭಿಸಿರಲಿಲ್ಲ. ನಂತರ ವಿಶೇಷ ಸೆಷನ್ಸ್​ ಕೋರ್ಟ್​ನಲ್ಲಿ ಸಲ್ಲಿಕೆಯಾದ ಜಾಮೀನು ಅರ್ಜಿಯ ತೀರ್ಪನ್ನು ಬುಧವಾರಕ್ಕೆ (ಅಕ್ಟೋಬರ್‌ ) ಕಾದಿರಿಸಲಾಗಿತ್ತು.
ಸದ್ಯಕ್ಕೆ ಜೈಲಿನಲ್ಲೇ ಕಾಲ ಕಳೆಯಬೇಕಾಗಿರುವ ಆರ್ಯನ್​ ಖಾನ್​ ವಕೀಲರಿಗೆ ಎನ್​ಡಿಪಿಎಸ್​ ಕೋರ್ಟ್​ನ ಈ ಆದೇಶದ ವಿರುದ್ಧ ಹೈಕೋರ್ಟ್​ಗೆ ಅಪೀಲು ಸಲ್ಲಿಸುವ ಅವಕಾಶವಿದೆ.

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement