ಮರದ ಜೊತೆ ಮದುವೆಯಾಗುತ್ತಿದ್ದಾರಂತೆ ದಕ್ಷಿಣದ ನಟಿಮಣಿ ನಯನತಾರಾ..? :ಕಾರಣವೇನೆಂದರೆ..

ಹೈದರಾಬಾದ್: ಈವರೆಗೆ ತಮ್ಮ ಬಾಯ್‍ಫ್ರೆಂಡ್ ವಿಘ್ನೇಶ್ ಶಿವನ್ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದ ದಕ್ಷಿಣ ಭಾಋತದ ಖ್ಯಾತ ನಟಿ ನಯನತಾರಾ ಈಗ ಇವರು ಮದುವೆ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.
ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಶೀಘ್ರವೇ ಇವರ ಮದುವೆ ನಡೆಯಲಿದೆ. ಆದರೆ ಈ ಬಗ್ಗೆ ಅವರು ಸುದ್ದಿಯಲ್ಲಿರುವುದಕ್ಕಿಂತ ಹೆಚ್ಚಾಗಿ ಈಗ ವಿಘ್ನೇಶ್ ಅವರ ಜೊತೆ ಮದುವೆ ಆಗುವುದಕ್ಕೂ ಮೊದಲು ಅವರು ಮತ್ತೊಂದು ಮದುವೆ ಆಗುತ್ತಿದ್ದಾರೆ ಎಂಬ ಕಾರಣಕ್ಕೆ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ. ಅದು ಕೂಡ ಅವರು ಮರವನ್ನು ಮದುವೆ ಆಗಲಿದ್ದಾರಂತೆ…!
ಹೌದು..ಅವರು ವಿಘ್ನೇಶ ಅವರನ್ನು ಮದುವೆಯಾಘುವ ಮೊದಲು ಮರವನ್ನು ಮದುವೆಯಾಗುತ್ತಿದ್ದಾರೆ ಎಂದು ಸುದ್ದಿಯಾಗಿದೆ. ವಿಘ್ನೇಶ್ ಶಿವನ್ ಮತ್ತು ನಯನತಾರಾ ಪರಸ್ಪರ ಜೊತೆಯಾಗಿ ಕಾಲ ಕಳೆಯುತ್ತಿರುವ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೇಮವನ್ನು ಬಹಿರಂಗ ಪಡಿಸಿದ್ದಾರೆ. ಆದರೆ ಅವರು ಮರವನ್ನು ಮದುವೆಯಾಗುವುದು ಏಕೆ ಎಂಬುದು ಸುದ್ದಿಗೆ ಕಾರಣ.
ಇದಕ್ಕೆ ಕಾರಣ ನಯನತಾರಾ ಹಾಗೂ ವಿಘ್ನೇಶ್ ಇಬ್ಬರೂ ಜ್ಯೋತಿಷ್ಯವನ್ನು ಹೆಚ್ಚು ನಂಬುತ್ತಾರೆ. ಹೀಗಾಗಿ ಅವರಿಬ್ಬರು ತಮ್ಮ ಜಾತಕವನ್ನು ಜ್ಯೋತಿಷಿ ಬಳಿ ತೋರಿಸಿದ್ದಾರೆ. ಜಾತಕದಲ್ಲಿ ಕೆಲ ದೋಷಗಳು ಕಂಡು ಬಂದಿದ್ದರಿಂದ ಜ್ಯೋತಿಷಿ ನಯನತಾರಾ ಅವರಿಗೆ ಮೊದಲು ಮರವನ್ನು ಮದುವೆ ಆಗಿ ನಂತರ ವಿಘ್ನೇಶ್ ಅವರನ್ನು ಮದುವೆ ಆಗುವಂತೆ ಸೂಚಿಸಿದ್ದಾರಂತೆ. ಹಿಂದೂ ಧರ್ಮದ ಪ್ರಕಾರ ಮರ ಅಥವಾ ಪ್ರಾಣಿಯನ್ನು ಮದುವೆ ಆದರೆ ದೋಷ ಅವರಿಗಿದ್ದ ದೋಷ ನಿವಾರಣೆ ಆಗುತ್ತದೆ. ಜ್ಯೋತಿಷ್ಯ ನಂಬುವವರು ಇದನ್ನು ನಂಬುತ್ತಾರೆ. ಅದೇ ರೀತಿ ನಯತಾರಾ ಮತ್ತು ಅವರ ಭಾವಿ ಪತಿ ವಿಘ್ನೇಶ ಕೂಡ ಈ ಶಾಸ್ತ್ರದ ಮೇಲೆ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಜ್ಯೋತಿಷಿ ಸಲಹೆ ಪಾಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement