ಇನ್ಫೋಸಿಸ್ ಪ್ರತಿಷ್ಠಾನದ ‘ವಿಶ್ರಾಮ ಸದನ’ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಕ್ಯಾನ್ಸರ್ ರೋಗಿಗಳಿಗಾಗಿ ನಿರ್ಮಿಸಲಾದ 806 ಹಾಸಿಗೆಗಳ ವಿಶ್ರಾಮ ಸದನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಗುರುವಾರ) ಉದ್ಘಾಟಿಸಿದರು.
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ (ಎಐಐಎಂಎಸ್) ಜಜ್ಜರ್ ಕ್ಯಾಂಪಸ್‍ನಲ್ಲಿರುವ ನ್ಯಾಷನಲ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನಲ್ಲಿ (ಎನ್‍ಐಸಿ) 806 ಹಾಸಿಗೆಗಳ ವಿಶ್ರಮ್ ಸದನಕ್ಕೆ ವಿಡಿಯೋ ಕಾನರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದರು.
ಇನ್ಫೋಸಿಸ್ ಪ್ರತಿಷ್ಠಾನವು ಸುಮಾರು 93 ಕೋಟಿ ರೂ ವೆಚ್ಚದಲ್ಲಿ ವಿಶ್ರಮ್ ಸದನವನ್ನು ನಿರ್ಮಿಸಿದ್ದು, 806 ಹಾಸಿಗೆಯ ವಿಶ್ರಾಮ ಸದನವು ಇನ್ಫೋಸಿಸ್ ಕಾಪೆರ್ರೇಟ್ ಸಾಮಾಜಿಕ ಹೊಣೆಗಾರಿಕೆಯ ಒಂದು ಭಾಗವಾಗಿದೆ.
ಕ್ಯಾನ್ಸರ್ ರೋಗಿಗಳ ಜೊತೆಗಿರುವ ಪರಿಚಾರಕರು ಹೆಚ್ಚಾಗಿ ಆಸ್ಪತ್ರೆಯಲ್ಲಿ ದೀರ್ಘಕಾಲ ಉಳಿಯಬೇಕಾಗುತ್ತದೆ. ಅವರಿಗೆ ಅನುಕೂಲವಾಗಲೆಂದು ಹವಾ ನಿಯಂತ್ರಿತ ವಸತಿ ಸೌಕರ್ಯಗಳನ್ನು ಇದರಲ್ಲಿ ಒದಗಿಸಲಾಗುತ್ತಿದೆ.

0 / 5. 0

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

ನಿಮ್ಮ ಕಾಮೆಂಟ್ ಬರೆಯಿರಿ

advertisement