ಬೆಂಗಳೂರು: ನಾಲ್ವರು ಕುಖ್ಯಾತ ಕಳ್ಳರನ್ನು ಬಂಸಿಧಿರುವ ಬಾಣಸವಾಡಿ ಉಪ ವಿಭಾಗದ ಪೊಲೀಸರು ಸುಮಾರು 1.25 ಕೋಟಿ ರೂ. ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ ಬಂದು ಪಿಸ್ತೂಲ್ ತೋರಿಸಿ ಸುಲಿಗೆ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸಲು ಬಂಧಿಸಿ ಅವರಿಂದ 5 ಜೀವಂತ ಗುಂಡುಗಳ ಸಮೇತ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ನೀಡಿದ ಹೇಳಿಕೆ ಮೇರೆಗೆ ಸುಮಾರು 65 ಲಕ್ಷ ರೂ. ಬೆಲೆ ಬಾಳುವ 1 ಕೆ.ಜಿ 200 ಗ್ರಾಂ ತೂಕದ ಚಿನ್ನದ ಒಡವೆಗಳು , 5 ಕೆ.ಜಿ ಬೆಳ್ಳಿಯ ಒಡವೆಗಳು, ಒಂದು ಕಾರು , 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವರ ಬಂಧನದಿಂದ 30 ಕನ್ನಗಳ ಕಳವು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳ ಬಂಧನದಿಂದ ಬಾಣಸವಾಡಿ ಪೊಲೀಸ್ ಠಾಣೆಯ 11 ಪ್ರಕರಣಗಳು, ಕೆ.ಜಿ.ಹಳ್ಳಿ ಪೊಲೀಸ್ ಠಾಣೆ 1 ಪ್ರಕರಣ, ಜೆ.ಸಿ.ನಗರ ಪೊಲೀಸ್ ಠಾಣೆ, ಪುಟ್ಟೇನಹಳ್ಳಿಪೊಲೀಸ್ ಠಾಣೆ, ಹೆಣ್ಣೂರು, ಕೋಲಾರ ನಗರ ಠಾಣೆ, ಅರಸೀಕೆರೆ ಟೌನ್ ಪೊಲೀಸ್ ಠಾಣೆ ಹಾಗೂ ಬೆಳಗಾವಿ ಜಿಲ್ಲೇಯ ಬೈಲಹೊಂಗಲ ಪೊಲೀಸ್ ಠಾಣೆಯ ತಲಾ 1 ಪ್ರಕರಣಗಳು ಸೇರಿದಂತೆ ಒಟ್ಟು 18 ಕನ್ನ ಕಳವು , ಕಾರು ಕಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ.
ಆರೋಪಿಗಳು ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಕೊಲೆ , ಸುಲಿಗೆ , ದರೋಡೆ , ಕನ್ನ ಕಳವು, ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಮೊದಲನೆ ಆರೋಪಿಯು ಬೆಂಗಳೂರು ನಗರದಲ್ಲಿಯೇ ಹುಟ್ಟಿ ಬೆಂಗಳೂರು ನಗರ ಪೊಲೀಸರು ಹುಡುಕಾಟದಲ್ಲಿರುವ ಕುಖ್ಯಾತ ಕನ್ನಕಳವು ಆರೋಪಿ ಅಜ್ಜತ್ ಹಾಗೂ ನ್ಯಾಯಾಂಗ ಬಂಧನದಲ್ಲಿರುವ ನಟೋರಿಯಸ್ ಆರೋಪಿಯಾದ ಖಲೀಂವುಲ್ಲೇ ಅಲಿಯಾಸ್ ಬಾಂಬೆ ಸಲೀಂ ಸ್ವಂತ ಸಹೋದರರ ಜೊತೆಯಲ್ಲಿಯೇ ಬೆಳೆದು ಅವರಂತೆಯೇ ನಟೋರಿಯಸ್ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರು ಜೊತೆಗೂಡಿ ಕಂಡಕಂಡಲ್ಲಿ ಹೆದ್ದಾರಿ ದರೋಡೆ ಜೊತೆಗೆ ಮನೆಯಲ್ಲಿ ಮಾಲೀಕರಿದ್ದರೆ ಪಿಸ್ತೂಲ್ ತೋರಿಸಿ ಬೆದರಿಸಿ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದರು.
ಈ ಕಾರ್ಯಾಚರಣೆ ನಡೆಸಿದ ತಂಡವನ್ನು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮುರುಗನ್ ಶ್ಲಾಘಿಸಿದ್ದು , ನಗದು ಬಹುಮಾನ ಘೋಷಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ