ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ 1 ಕೋಟಿ ರೂ. ದಂಡ ವಿಧಿಸಿದ ಆರ್​ಬಿಐ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ ಗೆ (PPBL) 1 ಕೋಟಿ ರೂ.ಗಳ ದಂಡ ವಿಧಿಸಿದೆ.
ಕೆಲವು ನಿಯಮ ಉಲ್ಲಂಘನೆಯ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಅಂತಿಮ ಪ್ರಮಾಣಪತ್ರ ದೃಢೀಕರಣದ ಪರೀಕ್ಷೆ ಮಾಡಿದಾಗ ಪಿಪಿಬಿಎಲ್​ನಿಂದ ಸಲ್ಲಿಸಿದ ಮಾಹಿತಿಯು ವಾಸ್ತವದ ಜತೆಗೆ ತಾಳೆ ಆಗುತ್ತಿರಲಿಲ್ಲ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಪಿಎಸ್​ಎಸ್​ ಕಾಯ್ದೆ ಸೆಕ್ಷನ್ 26 (2)ರ ಅಡಿಯಲ್ಲಿ ಪಿಪಿಬಿಎಲ್​ಗೆ ನೋಟಿಸ್ ನೀಡಲಾಯಿತು. ಲಿಖಿತ ಪ್ರತಿಕ್ರಿಯೆ ಮತ್ತು ವಯಕ್ತಿಕ ವಿಚಾರಣೆ ವೇಳೆ ಮೌಖಿಕ ಹೇಳಿಕೆಯನ್ನು ಪರಿಶೀಲಿಸಿದ ಮೇಲೆ ಮೇಲ್ಕಂಡ ಆರೋಪವು ದೃಢವಾಗಿದೆ, ದಂಡವನ್ನು ವಿಧಿಸಲಾಗಿದೆ,” ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಗಡಿ-ಆಚೆಗೆ ಹಾಗೂ ದೇಶದೊಳಗೆ ಸೇವೆ ಒದಗಿಸುವ ವೆಸ್ಟರ್ನ್ ಯೂನಿಯನ್ ಫೈನಾನ್ಷಿಯಲ್ ಸರ್ವೀಸಸ್ ಇಂಕ್ (WUFSI)ಗೆ 27 ಲಕ್ಷ ರೂ.ಗಳ ದಂಡ ಹಾಕಿದೆ. ಫೆಬ್ರವರಿ 22, 2017ರ ಹಣ ವರ್ಗಾವಣೆ ಸೇವಾ ಯೋಜನೆ ಮಾಸ್ಟರ್​ ನಿರ್ದೇಶನಗಳಲ್ಲಿ (MTSS) ಕೆಲವು ನಿಯಮಾವಳಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈ ದಂಡ ವಿಧಿಸಲಾಗಿದೆ.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement