ಬೆಂಗಳೂರು: ನಗರದಲ್ಲಿ ಹಂದಿ ಚಿಪ್ಪು ಮಾರುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರಿಂದ 8 ಕೆಜಿ 200 ಗ್ರಾಂ ತೂಕದ ಹಂದಿ ಚಿಪ್ಪು ಜಪ್ತಿ ಮಾಡಲಾಗಿದ್ದು, ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಈ ಅಕ್ರಮ ಮಾರಾಟ ಪತ್ತೆಯಾಗಿದೆ. ಬಳ್ಳಾರಿಯಲ್ಲಿ ಚಿಪ್ಪು ಹಂದಿ ಬೇಟೆಯಾಡಿದ್ದ ದುಷ್ಕರ್ಮಿಗಳು, ಬೆಂಗಳೂರಿನಲ್ಲಿ 1 ಲಕ್ಷ ರೂ.ಗಳಿಗೆ ಮಾರಾಟ ಮಾಡಲು ತಂದಿದ್ದರು ಎಂದು ತಿಳಿದುಬಂದಿದೆ. ಇಬ್ರಾಹಿಂ, ಮರಿಸ್ವಾಮಿ ಎಂಬವರನ್ನು ಬಂಧಿಸಿ ಹಂದಿ ಚಿಪ್ಪು ವಶಕ್ಕೆ ಪಡೆಯಲಾಗಿದೆ.
ಚೀನಾದಲ್ಲಿ ಹಂದಿ ಚಿಪ್ಪಿಗೆ ಅತ್ಯಂತ ಬೇಡಿಕೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದಕ್ಕೆ ಅಂದಾಜು 4 ಲಕ್ಷ ರೂಪಾಯಿ ಮೌಲ್ಯವಿದೆ ಎಂದು ತಿಳಿದುಬಂದಿದೆ. ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ