ರಾಜ್ಯ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕ’ರಿಗೆ ಗುಡ್ ನ್ಯೂಸ್: ಅ.26ರಿಂದ ‘ಶಿಕ್ಷಕರ ವರ್ಗಾವಣೆ’ಗೆ ಕೌನ್ಸಿಲಿಂಗ್ ಆರಂಭ

ಬೆಂಗಳೂರು: ವಿವಿಧ ಕಾರಣಗಳಿಂದಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ತಾಲೂಕಿನ ಹೊರಗೆ ಹಾಗೂ ಜಿಲ್ಲೆಯ ಹೊರಗೆ ವರ್ಗಾವಣೆಗೆ ವಿಶೇಷ ಕೌನ್ಸೆಲಿಂಗ್ ಅನ್ನು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದಿನಾಂಕ ಅಕ್ಟೋಬರ್‌ 26ರಿಂದ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ದಿನಾಂಕ 28ರಿಂದ ಹಮ್ಮಿಕೊಳ್ಳಲು ಪರಿಷ್ಕೃತ ವರ್ಗಾವಣೆ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಸೂಚನೆ ಹೊರಡಿಸಿದ್ದು, ವರ್ಗಾವಣೆಗೆ ವಿಶೇಷ ಕೌನ್ಸೆಲಿಂಗ್ ಆನ್‌ಲೈನ್‌ನಲ್ಲಿ ನಡೆಯಲಿದೆ. 2019-20ನೇ ಸಾಲಿನ ಸಾಮಾನ್ಯ ವರ್ಗಾವಣೆಗಳಲ್ಲಿನ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರುಹಂಚಿಕೆಯ ಆದೇಶ ಮಾಡಲಾಗಿತ್ತು. ಪ್ರಾಥಮಿಕ ಶಾಲಾ ಶಿಕ್ಷಕನ ಸಂದರ್ಭದಲ್ಲಿ ತಾಲ್ಲೂಕಿನ ಹೊರಗೆ ಅಥವಾ ಪ್ರೌಢಶಾಲಾ ಶಿಕ್ಷಕನ ಸಂದರ್ಭದಲ್ಲಿ ಜಿಲ್ಲೆಯ ಹೊರಗೆ ವರ್ಗಾವಣೆಗೊಂಡ ಶಿಕ್ಷಕನ ಸಂಬಂಧದಲ್ಲಿ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಆ ಸಂಬಂಧಪಟ್ಟ ತಾಲೂಕು ಅಥವಾ ಜಿಲ್ಲೆಯೊಳಗೆ ಸ್ಥಳನಿಯುಕ್ತಿ ಪ್ರಯೋಜನ ನೀಡುವುದಕ್ಕೆ ಖಾಲಿ ಹುದ್ದೆ ಲಭ್ಯತೆಗೆ ಒಳಪಟ್ಟು, ಸ್ಥಳ ಆಯ್ಕೆ ಮಾಡಿಕೊಳ್ಳಲು ಒಂದು ಸಲದ ಕ್ರಮವಾಗಿ ವಿಶೇಷ ಕೌನ್ಸೆಲಿಂಗ್ ಹಮ್ಮಿಕೊಳ್ಳಲು ವೇಳಾಪಟ್ಟಿ ಸಹ ಹೊರಡಿಸಲಾಗಿತ್ತು. ಆದರೆ ಈ ವರ್ಗಾವಣೆಗೆ ಕೆಎಟಿ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿತ್ತು. ಇದರಿಂದ ವರ್ಗಾವಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಆದರೆ ನ್ಯಾಯಾಲಯವು ದಿನಾಂಕ 18-10-2021ರಂದು ಈ ತಡೆಯಾಜ್ಞೆ ತೆರವುಗೊಳಿಸಿ, ಮಧ್ಯಂತರ ಆದೇಶವನ್ನು ನೀಡಿದ್ದು, ಈ ಹಿನ್ನಲೆಯಲ್ಲಿ ವರ್ಗಾವಣೆಗಳನ್ನು ಮುಂದುವರೆಸುವ ಸಂಬಂಧ ಕೆಳಗಿನಂತೆ ಪರಿಷ್ಕೃತ ವೇಳಾಪಟ್ಟಿ ಹೊರಡಿಸಲಾಗಿದೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

ಪರಿಷ್ಕೃತ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ

ಖಾಲಿ ಹುದ್ದೆಗಳ ಇಂದೀಕರಣ ಪ್ರಕ್ರಿಯೆ ನಂತರದಲ್ಲಿ ದಿನಾಂಕ 01-10-2021ಕ್ಕೆ ಲಭ್ಯವಿರುವ ಖಾಲಿ ಹುದ್ದೆಗಳ ವಿವರವನ್ನು 25-10-2021ರಂದು ಪ್ರಕಟಿಸುವುದು
2019-2020ರಲ್ಲಿ ತಾಲೂಕಿನಿಂದ, ಜಿಲ್ಲೆಯಿಂದ ಹೊರಗೆ ಕಡ್ಡಾಯ, ಹೆಚ್ಚುವರಿ ಪ್ರಕ್ರಿಯೆಯಲ್ಲಿ ವರ್ಗಾವಣೆಗೊಂಡ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಪಟ್ಟಿ ಮಾಹಿತಿಗಾಗಿ ಪ್ರಕಟಿಸಿವುದನ್ನು ಈ ಹಿಂದಿನ ಪ್ರಕಟಿತ ವೇಳಾಪಟ್ಟಿಯಂತೆ ಪ್ರಕ್ರಿಯೆ ಮುಗಿಸಲಾಗಿದೆ.
ಈಗಾಗಲೇ ಅರ್ಜಿಗಳನ್ನು ಸಲ್ಲಿಸಿರುವ ಶಿಕ್ಷಕರ ಅಂತಿಮ ಪಟ್ಟಿಯನ್ನು ಮಾಹಿತಿಗಾಗಿ ಪ್ರಕಟಿಸುವುದನ್ನು ಸಹ ಹಿಂದಿನ ಪ್ರಕಟಿತ ವೇಳಾಪಟ್ಟಿಯಂತೆ ಪ್ರಕ್ರಿಯೆ ಮುಗಿಸಲಾಗಿದೆ.
ಅಂತಿಮ ಕೌನ್ಸೆಲಿಂಗ್ ಅರ್ಹತಾ, ಜೇಷ್ಟತಾ ಪಟ್ಟಿ ಪ್ರಕಟಣೆಯು ಸಹ ಹಿಂದಿನ ಪ್ರಕಟಿತ ವೇಳಾಪಟ್ಟಿಯಂತೆ ಪ್ರಕ್ರಿಯೆ ಮುಗಿದಿದೆ. ಇದನ್ನು ದಿನಾಂಕ 22-10-2021ರಂದು ಮರು ಪ್ರಕಟ ಮಾಡಲಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆನ್ ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ದಿನಾಂಕ 26-10-2021ರಿಂದ ಆರಂಭವಾಗಲಿದೆ. ಪ್ರೌಢ ಶಾಲಾ ಶಿಕ್ಷಕರಿಗೆ ಆನ್ ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ದಿನಾಂಕ 28-10-2021ರಿಂದ ಆರಂಭವಾಗಲಿದೆ ಎಂದು ತಿಳಿಸಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement