ಸಿದ್ದರಾಮಯ್ಯರನ್ನು ಒಂದು ತಿಂಗಳು ತಾಲಿಬಾನ್ ಆಡಳಿತದ ಪ್ರದೇಶಕ್ಕೆ ಕಳುಹಿಸಬೇಕು: ಶ್ರೀನಿವಾಸ್ ಪ್ರಸಾದ್

ಮೈಸೂರು: ತಾಲಿಬಾನ್‌ ಆಡಳಿತವನ್ನು ಪರಿಶೀಲಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಿಕೊಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಸಿಂದಗಿ, ಹಾನಗಲ್ ಉಪಚುನಾವಣೆ ಸಂಬಂಧ ರಾಜ್ಯ ನಾಯಕರ ಮಾತು ಮಿತಿ ಮೀರಿದೆ. ನಾನು ಕೂಡ ಮಾಧ್ಯಮಗಳಲ್ಲಿ ಅವರ ಹೇಳಿಕೆ ನೋಡಿದ್ದೇನೆ. ಚುನಾವಣೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಮಾತು ಮಿತಿ ಮೀರಿದೆ. ಆಡಳಿತ ಪಕ್ಷಕ್ಕೂ ಜವಾಬ್ದಾರಿ ಇದೆ, ಪ್ರತಿ ಪಕ್ಷಕ್ಕೂ ಒಂದು ಜವಾಬ್ದಾರಿ ಇದೆ. ಪ್ರತಿಪಕ್ಷದ ನಾಯರ ಮಾತು ಮಿತಿ ಮೀರಿದೆ. ವಿರೋಧ ಪಕ್ಷದ ನಾಯಕ ಅವರ ಜವಾಬ್ದಾರಿ ಮರೆಯಬಾರದು ಎಂದು ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ನಡೆಸಿದರು.
ಪ್ರಧಾನ ಮಂತ್ರಿಗಳಿಗೆ ಒಂದು ಗೌರವ ಇದೆ. ಈ ರೀತಿಯಲ್ಲಿ ಅವಹೇಳನಕಾರಿಯಾಗು ಮಾತನಾಡಬಾರದು. ಸಿದ್ದರಾಮಯ್ಯನವರು ತಾಳ್ಮೆ ಕಳೆದುಕೊಂಡು ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಅವರು ರಾಷ್ಟ್ರಮಟ್ಟದ ರಾಜಕೀಯವನ್ನು ಅರ್ಥ ಮಾಡಿಕೊಂಡು ಮಾತನಾಡುತ್ತಿಲ್ಲ. ಸಿದ್ದರಾಮಯ್ಯನವರ ಭಾಷಣ ಕೇಳಿದ್ದೀರಾ? ಯಾರಾದರೂ ಸಹಿಸುತ್ತಾರೆಯೇ? ಅದಕ್ಕೆ ಆಡಳಿತ ಪಕ್ಷದವರು ಪ್ರತಿಕ್ರಿಯೆ ನೀಡಿದರೆ ಅದು ತಪ್ಪೇ’ ಎಂದು ಶ್ರೀನಿವಾಸ ಪ್ರಸಾದ ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕ ತನ್ನ ಜವಾಬ್ದಾರಿ ಅರಿತು ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಬೇಕು. ಅದನ್ನು ಬಿಟ್ಟು ಈ ದೇಶದ ಪ್ರಧಾನಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಕೇಂದ್ರ, ರಾಜ್ಯ ಸರ್ಕಾರವನ್ನು ತಾಲಿಬಾನ್‌ಗೆ ಹೋಲಿಸುತ್ತಿದ್ದಾರೆ. ರಾಷ್ಟ್ರ ಮಟ್ಟದ ಯಾವ ನಾಯಕನೂ ಹೀಗೆ ಮಾತನಾಡುತ್ತಿಲ್ಲ. ಇದು ನನ್ನ ಮನಸ್ಸಿಗೆ ನೋವಾಗಿದೆ’ ಎಂದರು.
ಇಲ್ಲಿ ಸರ್ಕಾರಗಳನ್ನು ತಾಲಿಬಾನಿಗೆ ಹೋಲಿಸುವ ಸಿದ್ದರಾಮಯ್ಯನವರನ್ನು ಒಂದು ಅಫ್ಘಾನಿಸ್ತಾನಕ್ಕೆ ಕಳುಹಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಈ ರೀತಿಯ ಹೇಳಿಕೆಗಳಿಂದ ಬಹಳ ನೋವಾಗಿದೆ ಎಂದು ಶ್ರೀನಿವಾಸ ಪ್ರಸಾದ ಹೇಳಿದರು.
ಬೇರೆ ಸಮಯದಲ್ಲಿ ಈ ವಿಚಾರದ ಬಗ್ಗೆ ಮಾತನಾಡುತ್ತೇನೆ. ನಾನು ಚುನಾವಣಾ ಕ್ಷೇತ್ರಗಳಿಗೆ ಹೋಗಿಲ್ಲ. ಆದರೆ ಚುನಾವಣೆಯಲ್ಲಿ ನಾವು ಎರಡು ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement