ಬೆಂಗಳೂರು: ಪುಟ್ಟ ಬಾಲಕನೊಬ್ಬ ಅಪ್ಪನ ಕೈ ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಮಿಲಿಟರಿ ವಾಹನ ನೋಡಿ ಥಟ್ಟನೆ ನಿಂತ ಆ ಬಾಲಕ ಮಿಲಿಟರಿ ವಾಹನದಲ್ಲಿದ್ದ ಸೈನಿಕರಿಗೆ ಸೆಲ್ಯೂಟ್ ಮಾಡಿದ. ಾದಕ್ಕೆ ಪ್ರತಿಯಾಗಿ ಸೈನಿಕನೂ ಬಾಲಕನಿಗೆ ವಾಹನದಲ್ಲಿ ಕುಳಿತಲ್ಲಿಂದಲೇ ಸೆಲ್ಯೂಟ್ ಮಾಡಿದ. ಈ ಹೃದಯಸ್ಪರ್ಶಿ ಘಟನೆ ನಡೆದಿದ್ದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಗೆ ಸೆಲ್ಯೂಟ್ ಮಾಡಿದ ಪುಟ್ಟ ಹುಡುಗನ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ನಾಲ್ಕು ವರ್ಷದ ವೀರ್ ಅರ್ಜುನ್ ತನ್ನ ತಂದೆಯ ಕೈ ಹಿಡಿದುಕೊಂಡು ವಿಮಾನ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ಕರ್ತವ್ಯದಲ್ಲಿದ್ದ ಸಿಐಎಸ್ಎಫ್ ಸೈನಿಕರನ್ನು ಗಮನಿಸಿದ್ದಾನೆ. ಚಿಕ್ಕ ಹುಡುಗ ಅಲ್ಲೇ ನಿಂತು ಮಿಲಿಟರಿ ವಾಹನ ಹಾಗೂ ಅದರ ಮೇಲೆ ಕುಳಿತ ಸೈನಿಕನನ್ನು ಒಂದು ಕ್ಷಣ ಗಮನಿಸಿದ್ದಾನೆ. ನಂತರ ಸೈನಿಕರ ಕಡೆಗೆ ತಿರುಗಿ ಕೈ ಎತ್ತಿ ಸಲ್ಯೂಟ್ ಮಾಡಿದ ದೃಶ್ಯಗಳು ಸಾಮಾಜಿಕ ಮಾಧ್ಯಮ ಕಾರ್ಯಕ್ರಮಗಳಲ್ಲಿ ವೈರಲ್ ಆಗಿವೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಸಿಐಎಸ್‌ಎಫ್ ಸಿಬ್ಬಂದಿ, ವಾಹನದೊಳಗೆ ನಿಂತು ಸೆಲ್ಯೂಟ್ ಮಾಡಿದ್ದಾರೆ. ಅದನ್ನು ನೋಡಿದ ಹುಡುಗನ ಮುಖದಲ್ಲಿ ನಗು ಮೂಡಿದೆ. ವೀರ್ ಅವರ ತಂದೆ ಅರ್ಜುನ್ ಎಂಎಸ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ಈ ವೀಡಿಯೊ ವೈರಲ್ ಆಗಿದೆ. ಅಕ್ಟೋಬರ್ 18ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈ ವಿಡಿಯೋವನ್ನು ಹುಡುಗನ ತಾಯಿ ಚಿತ್ರೀಕರಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ