ಮುಂಬೈ ಡ್ರಗ್ ಪ್ರಕರಣ: ಸ್ವತಂತ್ರ ಸಾಕ್ಷಿದಾರ ಕಿರಣ್ ಗೋಸಾವಿ ಶರಣು?

ಮುಂಬೈ: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದ ಮತ್ತು ವಿಡಿಯೋ ಮಾಡಿಕೊಂಡಿದ್ದ ಕಿರಣ್ ಗೋಸಾಮಿ ತಾವು ಎನ್‌ಸಿಬಿಗೆ ಶರಣಾಗುವುದಾಗಿ ಹೇಳಿಕೊಂಡಿದ್ದಾರೆ.
ಖಾಸಗಿ ತನಿಖಾಧಿಕಾರಿ ಕಿರಣ್ ಗೋಸಾವಿ ಅವರು ಲಕ್ನೋದಲ್ಲಿ ಶೀಘ್ರದಲ್ಲೇ ಶರಣಾಗುವುದಾಗಿ ತಿಳಿಸಿದ್ದಾರೆ. “ನಾನು ಅರ್ಧ ಗಂಟೆಯೊಳಗೆ ಲಕ್ನೋದಲ್ಲಿ ಶರಣಾಗುತ್ತೇನೆ” ಎಂದು ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮುಂಬೈನಲ್ಲಿ ಪ್ರಕರಣ ದಾಖಲಾಗಿರುವಾಗ ಲಕ್ನೋದಲ್ಲಿ ಏಕೆ ಶರಣಾಗುತ್ತಿದ್ದೀರಿ ಎಂದು ಕೇಳಿದಾಗ, ಕೆಪಿ ಗೋಸಾವಿ ಅವರು ನಗರದಲ್ಲಿ ಜೀವ ಬೆದರಿಕೆ ಇದೆ ಎಂದು ಎಂದು ಹೇಳಿಕೊಂಡಿದ್ದಾರೆ. ಖಾಸಗಿ ತನಿಖಾಧಿಕಾರಿ ಕೆಪಿ ಗೋಸಾವಿ ಕ್ರೂಸ್ ಹಡಗು ದಾಳಿಯ ಸಮಯದಲ್ಲಿ ಮತ್ತು ನಂತರ ಆರ್ಯನ್ ಖಾನ್ ಜೊತೆ ಎನ್‌ಸಿಬಿ ಕಚೇರಿಯಲ್ಲಿ ಹಾಜರಿದ್ದರು. ಎರಡೂ ಸ್ಥಳಗಳಲ್ಲಿ ಆರ್ಯನ್ ಖಾನ್ ಅವರೊಂದಿಗೆ ಅವರು ಸೆಲ್ಫಿ ಮತ್ತು ವೀಡಿಯೊಗಳನ್ನು ಮಾಡಿರುವುದು ಭಾರೀ ವೈರಲ್ ಆಗಿದೆ.
ಕಿರಣ್ ಗೋಸಾವಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸ್ವತಂತ್ರ ಸಾಕ್ಷಿದಾರ ಎಂದು ಕರೆದಿದೆ. ಈತ ಆರ್ಯನ್ ಖಾನ್ ನೊಂದಿಗೆ ಘಟನೆ ವೇಳೆ ಫೋಟೋ ಮತ್ತು ವಿಡಿಯೋಗಳನ್ನು ಮಾಡಿದ್ದು ಭಾರೀ ವೈರಲ್ ಆಗಿತ್ತು. ಈಗ ಆತನಿಂದ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಲಂಚ ಪಡೆಲು ಡೀಲ್ ಮಾಡಿಕೊಂಡಿದ್ದರು ಎಂದು ಆತನ ವೈಯಕ್ತಿಕ ಅಂಗರಕ್ಷಕ ಪ್ರಭಾಕರ್ ಸೈಲ್‌ ಹೇಳಿಕೊಂಡಿದ್ದಾನೆ.
ಖಾಸಗಿ ತನಿಖಾಧಿಕಾರಿ ಕಿರಣ್ ಗೋಸಾವಿ ಅಂಗರಕ್ಷಕನಾಗಿ ಕೆಲಸ ಮಾಡುವ ಪ್ರಭಾಕರ್‌ ಎಂಬಾತ ನಿನ್ನೆಯಷ್ಟೇ ಸ್ಪೋಟಕ ಹೇಳಿಯನ್ನ ನೀಡಿದ್ದನು. ಪ್ರಭಾಕರ್ ಹೇಳುವಂತೆ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ಹಾಗೂ ಕಿರಣ್ ಗೋಸಾವಿಯೊಂದಿಗೆ ಪ್ರಕರಣ ಕೈಬಿಡಲು 25 ಕೋಟಿ ರು ಡೀಲ್ ನಡೆದಿದೆ. ಈ ಒಪ್ಪಂದ ಕೊನೆಗೆ 18 ಕೋಟಿ ರುಗೆ ಬಂದು ತಲುಪಿತು. ಈ ವೇಳೆ ಕಿರಣ್ ಈ ಹಣದಲ್ಲಿ 8 ಕೋಟಿ ರು ಸಮೀರ್ ವಾಂಖೇಡೆಗೆ ಸೇರುತ್ತದೆ. ಉಳಿದಂತೆ ಇತರರಿಗೆ ಸೇರುತ್ತದೆ ಎಂದು ಹೇಳಿದ್ದರು ಎಂದು ಪ್ರಭಾಕರ್ ಹೇಳಿಕೊಂಡಿದ್ದಾರೆ. ಹೀಗಾಗಿ ಪ್ರಕರಣ ಬೇರೆ ಹಾದಿ ಹಿಡಿದೆ. ಈ ವೇಳೆ ಕಿರಣ್ ಗೋಸಾವಿ ತಲೆಮರಿಸಿಕೊಂಡಿದ್ದರು. ಪ್ರಭಾಕರ್ ಆರೋಪದಿಂದಾಗಿ ಪ್ರಕರಣ ಮತ್ತಷ್ಟು ಚುರುಕುಗೊಂಡಿದೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement