ಮುಂಬೈ: ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಲು ಮತ್ತೊಬ್ಬ ಸಾಕ್ಷಿಯ ಮೂಲಕ 25 ಕೋಟಿ ರೂಪಾಯಿ ಲಂಚ ಕೇಳಿದ್ದಾರೆ ಎಂದು ಸಾಕ್ಷಿಯೊಬ್ಬರು ಆರೋಪಿಸಿದ ನಂತರ ವಲಯ ನಿರ್ದೇಶಕ ಸಮೀರ್ ವಾಂಖೇಡೆ ವಿರುದ್ಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ವಿಜಿಲೆನ್ಸ್ ತನಿಖೆಗೆ ಆದೇಶಿಸಿದೆ.
ಎನ್ಸಿಬಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಜ್ಞಾನೇಶ್ವರ್ ಸಿಂಗ್, “ನಾನು ಸಮೀರ್ ವಾಂಖೆಡೆ ವಿರುದ್ಧದ ಆರೋಪಗಳ ವಿಚಾರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ. ವಾಂಖೇಡೆ ಹುದ್ದೆಯಲ್ಲಿ ಉಳಿಯುತ್ತಾರೆಯೇ ಎಂಬ ಪ್ರಶ್ನೆಗೆ, “ಕಾಮೆಂಟ್ ಮಾಡಲು ಇದು ಅಕಾಲಿಕವಾಗಿದೆ. ನಾವು ವಿಚಾರಣೆಯನ್ನು ಪ್ರಾರಂಭಿಸಿದ್ದೇವೆ” ಎಂದು ಸಿಂಗ್ ಹೇಳಿದರು.
ಮುಂಬೈ ಎನ್ಸಿಬಿ ಅಧಿಕಾರಿಗಳು ತನಿಖಾ ಸಂಸ್ಥೆಯ ವಿರುದ್ಧದ ಆರೋಪಗಳ ಕುರಿತು ಎನ್ಸಿಬಿ ಮಹಾನಿರ್ದೇಶಕರಿಗೆ ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ.
ಮೂಲಗಳ ಪ್ರಕಾರ, ಎನ್ಸಿಬಿಯ ಮುಖ್ಯ ವಿಜಿಲೆನ್ಸ್ ಅಧಿಕಾರಿಯೂ ಆಗಿರುವ ಡಿಡಿಜಿ ಜ್ಞಾನೇಶ್ವರ್ ಸಿಂಗ್ ಅವರಿಗೆ ವಾಂಖೇಡೆ ಮೇಲಿನ ವಿಜಿಲೆನ್ಸ್ ಆಂತರಿಕ ತನಿಖೆಯನ್ನು ವಹಿಸಲಾಗುತ್ತದೆ.
ಸಮೀರ್ ವಾಂಖೇಡೆ ಅವರು ಮಂಗಳವಾರ ಪರಿಶೀಲನಾ ಸಭೆಗಾಗಿ ದೆಹಲಿ ಎನ್ಸಿಬಿ ಪ್ರಧಾನ ಕಚೇರಿಗೆ ಆಗಮಿಸಲಿದ್ದಾರೆ.
ಏತನ್ಮಧ್ಯೆ, ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ ಸ್ವತಂತ್ರ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ ಅವರು ಸೋಮವಾರ ಮುಂಬೈ ಪೊಲೀಸ್ ಆಯುಕ್ತರ ಕಚೇರಿಗೆ ಹಿರಿಯ ಭದ್ರತಾ ಅಧಿಕಾರಿಗಳನ್ನು ಭೇಟಿ ಮಾಡಲು ಆಗಮಿಸಿದರು. ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಕೈಬಿಡಲು ಎನ್ಸಿಬಿ ಅಧಿಕಾರಿಯೊಬ್ಬರು 25 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದರು ಎಂದು ಅವರು ಭಾನುವಾರ ಹೇಳಿದ್ದಾರೆ.
ಸೈಲ್ ತನ್ನ ಭದ್ರತಾ ಕಾಳಜಿಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದರು. ಬೆಳಗ್ಗೆ 11.20ರ ಸುಮಾರಿಗೆ ಕಮಿಷನರ್ ಕಚೇರಿ ಆವರಣಕ್ಕೆ ಆಗಮಿಸಿದ ಅವರು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಮಿಲಿಂದ್ ಭಾರಂಭೆ ಅವರನ್ನು ಭೇಟಿ ಮಾಡಿದರು.
ಭಾನುವಾರದಂದು, ಸೈಲ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಮ್ಮ ಜೀವಕ್ಕೆ ಬೆದರಿಕೆಯ ಇದೆ ಎಂದು ಹೇಳಿದ್ದರು.
ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ರನ್ನು ಬಿಟ್ಟುಬಿಡಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಅಧಿಕಾರಿ ಮತ್ತು ತಲೆಮರೆಸಿಕೊಂಡಿದ್ದ ಸಾಕ್ಷಿ ಕೆ ಪಿ ಗೋಸಾವಿ ಸೇರಿದಂತೆ ಇತರ ವ್ಯಕ್ತಿಗಳು 25 ಕೋಟಿ ರೂಪಾಯಿಗಳನ್ನು ಬೇಡಿಕೆ ಇಟ್ಟಿದ್ದಾರೆ ಎಂದು ‘ಸ್ವತಂತ್ರ ಸಾಕ್ಷಿ’ ಸೈಲ್ ಹೇಳಿಕೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ