ಅಮಾನ್ಯೀಕರಣಗೊಂಡ ನೋಟುಗಳ ಬದಲಾಯಿಸುವ ನೆಪದಲ್ಲಿ ಜೆರಾಕ್ಸ್‌ ನೋಟು ಕೊಡುತ್ತಿದ್ದ ಖದೀಮರು: ಐವರ ಬಂಧನ

ಬೆಂಗಳೂರು: ನೋಟ್‌ ಬ್ಯಾನ್‌ ಆಗಿರುವ ಹಾಗೂ ಚಲಾವಣೆಯಲ್ಲಿ ಇಲ್ಲದ ನೋಟುಗಳನ್ನು ಬದಲಾಯಿಸಿ ಕೊಡುವುದಾಗಿ ಹೇಳಿ ಜೆರಾಕ್ಸ್ ಪ್ರಿಂಟ್‌ ಮಾಡಿದ ನೋಟ್‌ ಕೊಟ್ಟು ಜನರಿಗೆ ವಂಚಿಸುತ್ತಿದ್ದ ಜಾಲವೊಂದು ಪೋಲಿಸರ ಬಲೆಗೆ ಬಿದ್ದಿದೆ. ಇವರ ಬಳಿಯಲ್ಲಿದ್ದ ಒಂದು ಸಾವಿರದ ನಿಷೇಧಿತ ಕಲರ್‌ ಜೆರಾಕ್ಸ್‌ ಕಂತೆ ಕಂತೆ ನಕಲಿ ನೋಟುಗಳನ್ನು ಕಂಡು ಪೋಲಿಸರೇ ಬೆಚ್ಚಿಬಿದ್ದಿದ್ದಾರೆ.
ಅಮಾನ್ಯೀಕರಣಗೊಂಡಿರುವ 1000 ಮತ್ತು 500 ರೂ. ಮುಖ ಬೆಲೆಯ ನೋಟುಗಳನ್ನು ಜೆರಾಕ್ಸ್ ಮಾಡಿ ಅಕ್ರಮವಾಗಿ ಎಕ್ಸ್ ಚೇಂಜ್ ವಹಿವಾಟು ದಂಧೆ ನಡೆಸುತ್ತಿದ್ದ ಜಾಲವನ್ನು ಗೋವಿಂದಪುರ ಪೊಲೀಸರು ಪತ್ತೆ ಮಾಡಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸುರೇಶ್ ಕುಮಾರ್, ರಾಮಕೃಷ್ಣ, ಮಂಜುನಾಥ್, ಗುತ್ತಿಗೆದಾರ ವೆಂಕಟೇಶ್, ದಯಾನಂದ್ ಬಂಧಿತ ಆರೋಪಿಗಳು. ಇವರಿಂದ 85 ಲಕ್ಷ ರೂ. ಮೌಲ್ಯದ ಅಮಾನ್ಯೀಕರಣಗೊಂಡಿರುವ ನೋಟುಗಳು ಹಾಗೂ ಐದು ಕೋಟಿ ರೂ. ಮೌಲ್ಯದ ಅಮಾನ್ಯೀಕರಣಗೊಂಡಿರುವ ನೋಟುಗಳ ಜೆರಾಕ್ಸ್ ಪ್ರತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಅಮಾನ್ಯೀಕರಣಗೊಂಡಿರುವ ನೋಟುಗಳನ್ನು ಕೈ ಬದಲಾವಣೆ ಮಾಡಲು ಎಚ್‌ಆರ್‌ಬಿಆರ್ ಬಡಾವಣೆಗೆ ಬಂದಿದ್ದ ಮೂವರ ಬಗ್ಗೆ ಸುಳಿವು ಪಡೆದು ಕಾರ್ಯಾಚರಣೆ ನಡೆಸಿದ ಗೋವಿಂದಪುರ ಪೊಲೀಸರು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೂವರ ಬ್ಯಾಗಿನಲ್ಲಿ ಅಮಾನ್ಯೀಕರಣಗೊಂಡಿರುವ ನೋಟುಗಳು ಪತ್ತೆಯಾಗಿದ್ದವು. ಇವರ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸಿದ ಪೊಲೀಸರು, ಮತ್ತಿಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 1 ಸಾವಿರ ಹಾಗೂ 500 ರ ಮುಖ ಬೆಲೆಯ 70 ಲಕ್ಷ ನಿಷೇಧಿತ ಅಸಲಿ ನೋಟುಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬಂಧಿತ ಆರೋಪಿಗಳು ಬಾಕಿ ಹಣ ಕಾಸರಗೋಡಿನಲ್ಲಿ ಇದೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.
ಹೀಗಾಗಿ ಕಾಸರಗೋಡಿಗೆ ತೆರಳಿ ಪರಿಶೀಲಿಸಿದಾಗ 6 ಕೋಟಿ ಜೆರಾಕ್ಸ್‌ ನೋಟುಗಳ ಜೊತೆ 16 ಮೂಟೆ ಪೇಪರ್‌ ಗಳು ಪತ್ತೆಯಾಗಿವೆ. ಇವೆಲ್ಲವನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಈ 5 ಜನ ಆರೋಪಿಗಳು ನೋಟು ಸರಬರಾಜು ಮಾಡುವ ಇನ್ನು ಹಲವು ಮಂದಿಯ ಹೆಸರನ್ನು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಹುಕ್ಕಾ, ಹುಕ್ಕಾ ಬಾರ್‌ ನಿಷೇಧಿಸಿರುವ ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ಬಂದಿದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement