ಕಾರವಾರ:ಕಾಳಿನದಿಯಲ್ಲಿ ಮೀನು ಹಿಡಿಯಲು ಹೋಗಿ ಮೊಸಳೆ ಪಾಲಾಗಿದ್ದ ದಾಂಡೇಲಿಯ ಮೆಹಬೂಬ್ (15)ಬಾಲಕನ ಶವವು ಎರಡು ದಿನದ ನಂತರ ಇಂದು (ಮಂಗಳವಾರ) ಪತ್ತೆಯಾಗಿದೆ.
ಪೊಲೀಸರು ,ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಾಯದಿಂದ ಆತನ ಶವವನ್ನು ಪತ್ತೆಹಚ್ಚಿ ತರಲಾಗಿದೆ.ಮೊಸಳೆ ದಾಳಿಯಿಂದ ಆತನ ಒಂದು ಕೈ ಸಂಪೂರ್ಣ ತುಂಡಾಗಿದೆ.
ಎರಡು ದಿನಗಳಲ್ಲಿ ಬಹಳಷ್ಟು ಸತಾಯಿಸಿದ್ದ ಮೊಸಳೆ ಆಗೊಮ್ಮೆ, ಈಗೊಮ್ಮೆ ಎಂಬಂತೆ ಬಾಲಕನನ್ನು ಬಾಯಲ್ಲಿಟ್ಟುಕೊಂಡು ಕಾಣಿಸಿಕೊಂಡಿತು. ಮಂಗಳವಾರವೂ ಮೂರ್ನಾಲ್ಕು ಸಲ ಇದೇ ರೀತಿ ಬಾಲಕನನ್ನು ಬಾಯಲ್ಲಿಟ್ಟು ನೀರಲ್ಲಿ ಸಂಚರಿಸುವುದು ಕಂಡುಬಂದಿದೆ. ಇದನ್ನು ಗಮನಿಸಿದ ರಾಪ್ಟ್ ಮತ್ತು ಜಟ್ಟಿಯಲ್ಲಿದ್ದವರು ತಾಳ್ಮೆ ವಹಿಸಿ ಕಾರ್ಯಾಚರಣೆಯನ್ನು ಮುಂದುವರಿಸಿದರು.. ಇಂದು ಬೆಳಿಗ್ಗೆ ಹತ್ತುವರೆ ಘಂಟೆ ಸುಮಾರಿಗೆ ಎಲ್ಲ ಕಡೆಗಳಿಂದಲೂ ರಾಪ್ಟ್ ಹಾಗೂ ಜಟ್ಟಿಗಳು ಮೊಸಳೆಯನ್ನು ಸುತ್ತುವರಿದುಕೊಂಡಿದ್ದವು. ಬೆಳಿಗ್ಗೆ 10.45 ರಿಂದ 11 ಗಂಟೆ ಸುಮಾರಿಗೆ ಮೊಸಳೆಯ ಹತ್ತಿರ ಜಟ್ಟಿಯ ಮೂಲಕ ಧಾವಿಸಿ ಮೊಸಳೆಯ ಬಾಯಿಯಿಂದ ಬಾಲಕನ ಶವವನ್ನು ಎಳೆಯುತ್ತಲೆ ಮುಂದೆ ಸಾಗಿದರು. ಆದಾಗ್ಯೂ ಮೊಸಳೆ ಮಾತ್ರ ಬಾಲಕನ ದೇಹವನ್ನು ಹಿಂಬಾಲಿಸಿತ್ತು. ಒಮ್ಮೆ ಆತಂಕದ ವಾತವರಣ ಸೃಷ್ಟಿಯಾಯಿತಾದರೂ ತಕ್ಷಣವೆ ರಾಪ್ಟ್ ಗಳು ಜಟ್ಟಿಯ ಬಳಿ ಬಂದು ಮೊಸಳೆಯನ್ನು ಅಲ್ಲಿಂದ ಓಡಿಸಿ, ಬಾಲಕನ ಶವವನ್ನು ಜಟ್ಟಿಯಿಂದ ತೆಗೆದು ರಾಪ್ಟ್ ಮೂಲಕ ತಂದು ನದಿಯ ದಡಕ್ಕೆ ಮುಟ್ಟಿಸಿದರು.
ನಗರದ ಹಳಿಯಾಳ ರಸ್ತೆಯ ಅಲೈಡ್ ಪ್ರದೇಶದ ನಿವಾಸಿಯಾಗಿರುವ ಮೆಹಮೂದ್ ಅಲಿ ಮಿಯಾ ಗುಲ್ಬರ್ಗ ಎಂಬವರ ಮಗನಾದ 15 ವರ್ಷದ ಬಾಲಕ ಮೊಹಿನ್ ಮೆಹಮೂದ್ ಅಲಿ ಮಿಯಾ ಗುಲ್ಬರ್ಗ ಎಂಬತಾನನ್ನು ಮೊಸಳೆ ಎಳೆದೊಯ್ದುಕೊಂಡು ಹೋದ ಘಟನೆ ನಡೆದಿದೆ. ಹುಡುಕಲು ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಅವಿರತವಾಗಿ ಕಾರ್ಯಾಚರಣೆ ಕೈಗೊಂಡಿದ್ದರು.
ಸ್ಥಳೀಯರು ಎರಡ್ಮೂರು ತೆಪ್ಪದ ಮೂಲಕ ಬಾಲಕನ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು.. ಇತ್ತ ಜಂಗಲ್ ಲಾಡ್ಜಸ್ ಹಾಗೂ ಗಣೇಶಗುಡಿ ರ್ಯಾಪ್ಟ್ ಜೊತೆಗೆ ಪತ್ತೆ ಕಾರ್ಯಾಚರಣೆ ನಡೆಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ