ಕೇರಳದಲ್ಲಿ 15 ವರ್ಷದ ಬಾಲಕನಿಂದ 21 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ

ಮಲಪ್ಪುರಂ: ಆಘಾತಕಾರಿ ಘಟನೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ 15 ವರ್ಷದ ವಿದ್ಯಾರ್ಥಿಯೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ನಡೆಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕೇರಳದ ಕೊಂಡೊಟ್ಟಿಯಲ್ಲಿ ನಡೆದಿದೆ.
ನಿನ್ನೆ (ಸೋಮವಾರ) 21 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ 15 ವರ್ಷದ ಬಾಲಕನನ್ನು ಪೊಲೀಸರು ಇಂದು (ಮಂಗಳವಾರ) ಬಂಧಿಸಿದ್ದಾರೆ.
10ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಲಪ್ಪುರಂ ಎಸ್ಪಿ ಸುಜಿತ್ ದಾಸ್, ಹುಡುಗನಿಗೆ ಯಾವುದೇ ಅಪರಾಧದ ಹಿನ್ನೆಲೆಯಿಲ್ಲ. ಸಂತ್ರಸ್ತೆಯ ಪ್ರಕಾರ ಈ ಹಿಂದೆ ಎಂದಿಗೂ ಆತ ತೊಂದರೆ ನೀಡಿಲ್ಲ. ಆದರೆ, 21 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ ಎಂದು ತಿಳಿಸಿದ್ದಾರೆ.
ತನ್ನ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಬಾಲಕನಿಂದ ಆ ಯುವತಿ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ತಕ್ಷಣ ಘಟನೆ ನಡೆದ ಸ್ಥಳದಿಂದ ಆ ಹುಡುಗ ಕೂಡ ಪರಾರಿಯಾಗಿದ್ದಾನೆ. ಆತ ಮನೆಗೆ ಹೋದಾಗ ಆತನ ಕೊಳಕಾದ ಬಟ್ಟೆ, ಪರಚಿದ ಗಾಯ ನೋಡಿ ಮನೆಯವರು ಏನಾಯಿತೆಂದು ಗಾಬರಿಯಾಗಿದ್ದಾರೆ. ಆಗ ನಾಯಿ ಅಟ್ಟಿಸಿಕೊಂಡು ಬಂದ ಕಾರಣ ಕೆಳಗೆ ಬಿದ್ದು ಗಾಯ ಮಾಡಿಕೊಂಡೆ ಎಂದು ಆತ ಸುಳ್ಳು ಹೇಳಿದ್ದಾನೆ.
ಯುವತಿ ನೀಡಿದ ಮಾಹಿತಿ ಮೇರೆಗೆ ಆತನ ಮನೆಗೆ ಹೋದ ಪೊಲೀಸರು ವಿಚಾರಣೆ ನಡೆಸಿದಾಗ, 21 ವರ್ಷದ ಮಹಿಳೆಯ ಮೇಲೆ ಲೈಂಗಿಕ ದಾಳಿ ನಡೆಸಿದಾಗ ತನಗೆ ಗಾಯಗಳಾಗಿವೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಅಲ್ಲದೆ, ತನ್ನಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಯುವತಿಯ ಮುಖಕ್ಕೆ ಕಲ್ಲಿನಿಂದ ಹೊಡೆದು ಆತ ಗಾಯಗೊಳಿಸಿದ್ದಾನೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಎಎಪಿಗೆ ಆಘಾತ: ಪಕ್ಷದ ಏಕೈಕ ಲೋಕಸಭಾ ಸದಸ್ಯ ಬಿಜೆಪಿಗೆ ಸೇರ್ಪಡೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement