ಸಬ್​ಮರೀನ್ ಮಾಹಿತಿ ಸೋರಿಕೆ: ಕಮಾಂಡರ್ ಸೇರಿ ಮೂವರ ಬಂಧನ

ನವದೆಹಲಿ: ನೌಕಾಪಡೆಯ ಓರ್ವ ಕಮಾಂಡರ್ ಮತ್ತು ಇಬ್ಬರು ನಿವೃತ್ತ ಅಧಿಕಾರಿಗಳನ್ನು ಸಿಬಿಐ ಅರೆಸ್ಟ್​ ಮಾಡಿದೆ. ಬಂಧಿತರು ನೌಕಾಪಡೆಯ ಅಪ್​ಗ್ರೇಡೆಡ್ ಸಬ್​ಮರೀನ್​ಗಳ ದಾಖಲೆಯನ್ನು ಲೀಕ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಬಂಧನವಾಗುವ ಸಾಧ್ಯತೆ ಇದೆ. ಆದರೆ ಮಾಹಿತಿ ಸೋರಿಕೆ ವಿಚಾರದಲ್ಲಿ ವಿದೇಶಿ ಗುಪ್ತಚರ ಇಲಾಖೆಗಳ ಕೈವಾಡ ಇದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
ಕೆಲವು ಅನಧಿಕೃತ ಸಿಬಂದಿಯೊಂದಿಗೆ ಆಡಳಿತಾತ್ಮಕ ಮತ್ತು ವಾಣಿಜ್ಯ ಸ್ವರೂಪದ ಮಾಹಿತಿ ಸೋರಿಕೆಗೆ ಸಂಬಂಧಿಸಿದ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಬಗ್ಗೆ ನಾವು ಸೂಕ್ತ ಸರ್ಕಾರಿ ಏಜೆನ್ಸಿಯಿಂದ ತನಿಖೆ ನಡೆಸುವುದಾಗಿ ನೌಕಾಪಡೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಿದೆ.

 

5 / 5. 1

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

ನಿಮ್ಮ ಕಾಮೆಂಟ್ ಬರೆಯಿರಿ

advertisement