10 ಅಡಿ ಆಳದ ಬಾವಿಯಲ್ಲಿ ಬಿದ್ದ ಚಿರತೆ ರಕ್ಷಣೆ; ವೀಕ್ಷಿಸಿ

ಕಾಡಿನಿಂದ ದಾರಿ ತಪ್ಪಿ ಬಂದ ಚಿರತೆ ಸುಮಾರು 10 ಅಡಿ ಆಳದ ಬಾವಿಯಲ್ಲಿ ಬಿದ್ದಿದೆ. ಚಿರತೆಯನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಈ ಘಟನೆ ಮಹಾರಾಷ್ಟ್ರದಲ್ಲಿ ದೈತ್ಯಾಕಾರದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟು ರಕ್ಷಿಸಿದ ವಿಡಿಯೊ ಈಗ ವೈರಲ್ ಆಗಿದೆ. ವೈಲ್ಡ್​ಲೈಫ್​ ಟ್ವಿಟರ್​ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ. ವಿಡಿಯೊದಲ್ಲಿ ಗಮನಿಸುವಂತೆ ಚಿರತೆಯೊಂದು ಬಾವಿಯಲ್ಲಿ ಬಿದ್ದು ಮೇಲೇರಲು ಸಾಧ್ಯವಾಗದೇ ಕೈಕಾಲನ್ನು ನಿರಂತರವಾಗಿ ಬಡಿಯುತ್ತಿತ್ತು. ಶತಪ್ರಯತ್ನ ಪಟ್ಟರೂ ಕೂಡಾ ಬಾವಿಯಿಂದ ಮೇಲೇಳಲು ಸಾಧ್ಯವಾಗುತ್ತಿರಲಿಲ್ಲ.

ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ತಿಳಿಸುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಚಿರತೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಬಾವಿಯ ಸುತ್ತ ಸೇರಿದ್ದ ಜನರನ್ನು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡ ಚಿರತೆ ಘರ್ಜಿಸಲು ಪ್ರಾರಂಭಿಸಿದೆ.
ಆದರೂ ಹರಸಾಹಸಪಟ್ಟುಚಿರತೆ ಹಿಡಿಯಲು ಬಾವಿಯಲ್ಲಿ ಬೋನು ಇಳಿಸಿ ಅದರ ಮೇಲೆ ಹುಲ್ಲೆ, ಮಣ್ಣು ಉಲೆಗಳನ್ನು ಹಾಕಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ನಂತರ ಚಿರತೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement