ಟಿ-20 ವಿಶ್ವಕಪ್‌: ಹಿಂದೂಗಳ ಮಧ್ಯೆ ನಮಾಜ್ ಮಾಡಿದ್ದು ಖುಷಿಯಾಯ್ತು ಎಂದು ನಾಲಿಗೆ ಹರಿಬಿಟ್ಟ ಪಾಕ್ ಕ್ರಿಕೆಟಿಗ…!

ನವದೆಹಲಿ: ಟಿ-೨೦ ವಿಶ್ವಕಪ್‌ ಪಂದ್ಯದಲ್ಲಿ ಮೊದಲ ಬಾರಿ ಭಾರತವನ್ನು ಮಣಿಸಿರುವ ಪಾಕ್​ ತಂಡಕ್ಕೆ ಪಾಕಿಸ್ತಾನದಲ್ಲಿ ಭಾರೀ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಹೀಗೆ ಪ್ರಶಂಸೆ ವ್ಯಕ್ತಪಡಿಸುವ ಭರದಲ್ಲಿ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ವಕಾರ್ ಯೂನುಸ್ ವಿವಾದಾತ್ಮಕ ಹೇಳಿಕೆ ನೀಡಿ ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕ್ಷಮೆಯಾಚಿಸಿದ್ದಾರೆ.
ಭಾರತ-ಪಾಕಿಸ್ತಾನ ನಡುವಣ ಪಂದ್ಯದ ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ವಕಾರ್ ಯುನೂಸ್‌, ನನಗೆ ಪಾಕ್ ಆಟಗಾರ ರಿಜ್ವಾನ್ ಹಿಂದೂಗಳ ನಡುವೆ ನಮಾಜ್ ಮಾಡಿದ್ದು ವಿಶೇಷ ಎನಿಸಿದೆ ಎಂದು ಬಾಯಿಹರಿಬಿಟ್ಟಿದ್ದು ಈಗ ಭಾರೀ ಟೀಕೆಗೆ ಒಳಗಾಗಿದೆ. ಈ ಹೇಳಿಕೆಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ವಕಾರ್ ಯೂನಿಸ್ ತಮ್ಮ ಹೇಳಿಕೆಗಾಗಿ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ.
ಭಾರತ-ಪಾಕ್ ನಡುವಣ ಪಂದ್ಯದ ಇನಿಂಗ್ಸ್​ ಬ್ರೇಕ್ ವೇಳೆ ಪಾಕಿಸ್ತಾನ್ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಮೈದಾನದಲ್ಲೇ ನಮಾಜ್ ಮಾಡಿದ್ದರು. ಪಾಕ್-ಭಾರತ ಪಂದ್ಯದ ಚರ್ಚೆಯ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ್ದ ವಕಾರ್ ಯೂನುಸ್, ಹಿಂದೂಗಳಿಂದ ಸುತ್ತುವರಿದ ಮೈದಾನದಲ್ಲಿ ರಿಜ್ವಾನ್ ನಮಾಜ್ ಮಾಡಿದ್ದು, ನಿಜವಾಗಿಯೂ ನನಗೆ ತುಂಬಾ ವಿಶೇಷವಾಗಿತ್ತು ಎಂದು ಹೇಳಿದ್ದರು.
ಈ ಬಗ್ಗೆ ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಕ್ರೀಡೆಯಲ್ಲೂ ಧರ್ಮವನ್ನು ಎಳೆದು ತರುತ್ತಿರುವ ಬಗ್ಗೆ ವಕಾರ್ ವಿರುದ್ದ ಭಾರೀ ಟೀಕೆ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪಾಕ್ ಮಾಜಿ ಕ್ರಿಕೆಟಿಗನ ವಿರುದ್ಧ ಆಕ್ರೋಶಗಳು ಕೇಳಿ ಬರುತ್ತಿದ್ದಂತೆ ಇದೀಗ ವಕಾರ್ ತಮ್ಮ ವರಸೆ ಬದಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಕಾರ್ ಯೂನುಸ್, ತಾನು ಹೇಳಿದ್ದರ ಹಿಂದೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿರಲಿಲ್ಲ. ನನ್ನ ಹೇಳಿಕೆ ಅನೇಕರ ಭಾವನೆಗಳಿಗೆ ನೋವುಂಟು ಮಾಡಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಕ್ರೀಡೆಗಳು ಜಾತಿ, ಧರ್ಮ ಇತ್ಯಾದಿಗಳನ್ನು ಲೆಕ್ಕಿಸದೆ ಜನರನ್ನು ಒಂದುಗೂಡಿಸುತ್ತದೆ ಎಂದು ವಕಾರ್ ಕ್ಷಮೆಯಾಚಿಸಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement