ನೀರಜ್ ಚೋಪ್ರಾ, ಮಿಥಾಲಿ ರಾಜ್‌ ಸೇರಿ ಖೇಲ್ ರತ್ನ ಪ್ರಶಸ್ತಿಗೆ 11 ಸಾಧಕರು, ಅರ್ಜುನ ಪ್ರಶಸ್ತಿಗೆ 35 ಹೆಸರು ಶಿಫಾರಸು

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ,ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ ಮತ್ತು ಮಹಿಳಾ ಕ್ರಿಕೆಟ್‍ನಲ್ಲಿ ಸಾಧನೆ ಮಾಡಿದ ಮಿಥಾಲಿ ರಾಜ್ ಸೇರಿದಂತೆ 11 ಕ್ರೀಡಾಪಟುಗಳ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಇಂದು ಪ್ರಕಟಗೊಂಡ ಪ್ರಶಸ್ತಿ ಶಿಫಾರಸು ಪಟ್ಟಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ, ಪ್ಯಾರಾಲಂಪಿಕ್ಸ್ ಶೂಟಿಂಗ್‍ನಲ್ಲಿ ಚಿನ್ನದ ಪದಕ ಗೆದ್ದ ಅವನಿ ಲೇಖರಾ, ಮಹಿಳಾ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್‌ ಗಳಿಸಿ ವಿಶ್ವದಾಖಲೆ ಬರೆದಿರುವ ಮಿಥಾಲಿ ರಾಜ್ ಮತ್ತು ಫುಟ್‍ಬಾಲ್‍ನಲ್ಲಿ ಭಾರತದ ಪರ ಅತೀ ಹೆಚ್ಚು ಗೋಲ್ ಬಾರಿಸಿರುವ ಸುನೀಲ್ ಚೆಟ್ರಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.
ಈ ಹಿಂದೆ ರಾಜೀವ್ ಗಾಂಧಿ ಖೇಲ್ ರತ್ನ ಹೆಸರಿನಲ್ಲಿ ಪ್ರಶಸ್ತಿ ಈ ವರ್ಷದಿಂದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯಾಗಿದೆ.
ಖೇಲ್ ರತ್ನಗೆ ಶಿಫಾರಸುಗೊಂಡ ಕ್ರೀಡಾಪಟುಗಳೆಂದರೆ ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ರವಿಕುಮಾರ್ ದಹಿಯಾ (ಕುಸ್ತಿ), ಶ್ರೀಜೇಶ್ (ಹಾಕಿ) ಲವ್ಲಿನಾ (ಬಾಕ್ಸಿಂಗ್), ಅವನಿ ಲೆಖರಾ (ಶೂಟಿಂಗ್), ಸುನೀಲ್ ಚೆಟ್ರಿ (ಫುಟ್‍ಬಾಲ್), ಪ್ರಮೋದ್ ಭಗತ್ (ಬ್ಯಾಡ್ಮಿಂಟನ್), ಎಂ.ನರ್ವಾಲ್ (ಶೂಟಿಂಗ್), ಕೃಷ್ಣನಗರ್ (ಬ್ಯಾಡ್ಮಿಂಟನ್), ಮಿಥಾಲಿ ರಾಜ್(ಕ್ರಿಕೆಟ್) ಸುಮಿತ್ (ಅಥ್ಲೆಟಿಕ್ಸ್)h

ಪ್ರಮುಖ ಸುದ್ದಿ :-   ವಾಟ್ಸಾಪ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement