ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ತಲೆಯಂತೆ ಇರುವ ವಿಚಿತ್ರ ಮಗುವಿನ ಜನನ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ತಲೆಯನ್ನು ಹೋಲುವ ವಿಚಿತ್ರವಾದ ಮಗು ಜನಿಸಿದ್ದು, ಸದ್ಯ ತಾಯಿ ಸುರಕ್ಷಿತವಾಗಿದ್ದಾರೆ. ಮಗು ಸದ್ಯ ಜೀವಂತವಾಗಿದ್ದರೂ ಆರೋಗ್ಯ ಮುಂದೆ ಕ್ಷೀಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ.
ಅಂಕೋಲಾದ ಹೊನ್ನೆಕೇರಿ ಮೂಲದ ಮಹಿಳೆಯೊರ್ವರು ಹೊಟ್ಟೆ ನೋವಿನಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಭಟ್ಕಳದಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಮಗು ಎರಡು ತಲೆ ರೀತಿ ಕಾಣುವುದನ್ನು ನೋಡಿ ವೈದ್ಯರಿಗೆ ಅಚ್ಚರಿಯಾಗಿದೆ. ಮಹಿಳೆ ಬೇರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಕೊನೆಗೆ ಅವರು ಗರ್ಭಿಣಿ ಮಹಿಳೆಗೆ ಮಣಿಪಾಲ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರಂತೆ. ಮಣಿ ಆಸ್ಪತೆರಯಲ್ಲಿ ಮಗು ಬದುಕಿ ಉಳಿಯುವುದ ಕಷ್ಟ ಹಾಗೂ ಇಲ್ಲಿ ಆಸ್ಪತ್ರೆ ವೆಚ್ಚವೂ ಅಧಿಕವಾಗುತ್ತದೆ ಎಂದು ತಿಳಿಸಿದ್ದರಂತೆ. ಹೀಗಾಗಿ   ಮಹಿಳೆ ಭಟ್ಕಳ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಾಹಿಲ್‌ ಆನ್‌ಲೈನ್‌ ವರದಿ ಮಾಡಿದೆ.
ಭಟ್ಕಳದ ಹೆರಿಗೆ ತಜ್ಞೆ ಡಾ. ಶಂಸನೂರು ನಾರ್ಮಲ್ ಹೆರಿಗೆ ಮಾಡಿದ್ದಾರೆ. ತಾಯಿ ಸುರಕ್ಷಿತವಾಗಿದ್ದಾರೆ. ಆದರೆ ಎರಡು ತಲೆಯನ್ನು ಇರುವಂತೆ ಕಾಣುವ ಮಗುವು ಸದ್ಯ ಜೀವಂತವಾಗಿದ್ದರೂ ಬದುಕುವ ಲಕ್ಷಣ ಕ್ಷೀಣ ಎಂದು ವೈದ್ಯಾಧಿಕಾರಿ ಡಾ ಸವಿತಾ ಕಾಮತ ತಿಳಿಸಿದ್ದಾರೆ. ಇದು ೧೦ಸಾವಿರ ಶಿಶುಗಳಿಗಲ್ಲಿ ಒಬ್ಬರಿಗೆ ಬರುವ ಖಾಯಿಲೆಯಾಗಿದೆ ಎಂದು ಅವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement