ಏರ್ ಇಂಡಿಯಾದ ಎಲ್ಲ ಬಾಕಿ ಚುಕ್ತಾ ಮಾಡುವಂತೆ ಹಣಕಾಸು ಸಚಿವಾಲಯದಿಂದ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಸೂಚನೆ

ನವದೆಹಲಿ: ಏರ್​ ಇಂಡಿಯಾದ ಎಲ್ಲ ಬಾಕಿಯನ್ನೂ ತಕ್ಷಣ ಚುಕ್ತಾ ಮಾಡಬೇಕು ಎಂದು ಕೇಂದ್ರ ಹಣಕಾಸು ಇಲಾಖೆಯು ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಬುಧವಾರ ಸೂಚಿಸಿದೆ.
ಮುಂದಿನ ಆದೇಶದವರೆಗೆ ಕೇಂದ್ರ ಸರ್ಕಾರದ ಎಲ್ಲ ಅಧಿಕಾರಿಗಳೂ ಏರ್​ ಇಂಡಿಯಾದ ಟಿಕೆಟ್​ಗಳನ್ನು ಹಣ ತೆತ್ತು ಖರೀದಿಸಬೇಕು ಎಂದು ಸೂಚನೆ ನೀಡಿದೆ.
ಏರ್​ ಇಂಡಿಯಾ ಟಾಟಾ ಸನ್ಸ್​ಗೆ ಮಾರಾಟವಾದ ನಂತರ ಕೇಂದ್ರ ಸರ್ಕಾರಕ್ಕೆ ಸಾಲದ ಮೇಲೆ ಸೇವೆ ಒದಸುವ ಪರಿಪಾಠವನ್ನು ಏರ್​ ಇಂಡಿಯಾ ಕೈಬಿಟ್ಟಿದೆ. ಈ ಬೆಳವಣಿಗೆಯ ನಂತರ ಹಣಕಾಸು ಸಚಿವಾಲಯವು ಈ ನಿರ್ದೇಶನವನ್ನು ನೀಡಿದೆ.
ಏರ್​ ಇಂಡಿಯಾ ಖರೀದಿಗೆ ಟಾಟಾ ಸನ್ಸ್​ ಗ್ರೂಪ್​ ಸಲ್ಲಿಸಿದ್ದ ಬಿಡ್ ಅಂತಿಮಗೊಂಡ ನಂತರ ಟಿಕೆಟ್ ಖರೀದಿಗೆ ನೀಡುತ್ತಿದ್ದ ಸಾಲ ಸೌಲಭ್ಯವನ್ನು ಏರ್​ ಇಂಡಿಯಾ ನಿಲ್ಲಿಸಿದೆ. ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಏರ್ ಇಂಡಿಯಾದ ಬಾಕಿ ಚುಕ್ತ ಮಾಡುವಂತೆ ಮೆಮೊ ಮೂಲಕ ಸೂಚಿಸಿದೆ. .
ಏರ್ ಇಂಡಿಯಾವನ್ನು 18,000 ಕೋಟಿ ರೂಪಾಯಿಗೆ ಮಾರಾಟ ಮಾಡಲು ಟಾಟಾ ಸನ್ಸ್‌ನೊಂದಿಗೆ ಷೇರು ಖರೀದಿ ಒಪ್ಪಂದಕ್ಕೆ ಸರ್ಕಾರ ಸೋಮವಾರ (ಅ.25) ಸಹಿ ಹಾಕಿದೆ.

ಪ್ರಮುಖ ಸುದ್ದಿ :-   ವಾಟ್ಸಾಪ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement