ನಟ ರಜನಿಕಾಂತ್ ಚೆನ್ನೈ ಆಸ್ಪತ್ರೆಗೆ ದಾಖಲು

ಚೆನ್ನೈ: ನಟ ರಜನಿಕಾಂತ್ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ತಂಡದ ಪ್ರಕಾರ, ಅವರನ್ನು ‘ರೂಟಿನ್ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗುರುವಾರ ಸಂಜೆ 4.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದು ನಿಯಮಿತವಾಗಿ ಮಾಡುವ ಆರೋಗ್ಯ ತಪಾಸಣೆಯಾಗಿದೆ. ಅವರು ಈಗ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಯಲ್ಲಿದ್ದಾರೆ” ಎಂದು ರಜನಿಕಾಂತ ಅವರ ತಂಡದ ರಿಯಾಜ್ ಕೆ ಅಹ್ಮದ್ ತಿಳಿಸಿದ್ದಾರೆ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲು ರಜನಿಕಾಂತ್ ಅವರು ಕೆಲವೇ ದಿನಗಳ ಹಿಂದೆ ದೆಹಲಿಯಲ್ಲಿದ್ದರು. ಅವರು ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ನಟನ ಮುಂಬರುವ ಚಿತ್ರ ಅನ್ನತ್ತೆ ನವೆಂಬರ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

0 / 5. 0

ಪ್ರಮುಖ ಸುದ್ದಿ :-   ಪಹಲ್ಗಾಮ್ ದಾಳಿ : ಭಯೋತ್ಪಾದಕ ಗುಂಪು ಲಷ್ಕರ್ ಅಂಗಸಂಸ್ಥೆ ಟಿಆರ್‌ಎಫ್ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪುರಾವೆ ಸಲ್ಲಿಸಲಿರುವ ಭಾರತ

ನಿಮ್ಮ ಕಾಮೆಂಟ್ ಬರೆಯಿರಿ

advertisement