ಮಕ್ಕಳ ಕಲಿಕೆಗಾಗಿ ಪರ್ಯಾಯ ಶೈಕ್ಷಣಿಕ ವರ್ಷ ಕಾರ್ಯಕ್ರಮ

ಬೆಂಗಳೂರು: ರಾಜ್ಯದಲ್ಲಿ ಒಂದೂವರೆ ವರ್ಷದ ಬಳಿಕ ಪ್ರಾಾಥಮಿಕ ಶಾಲೆಗಳು ಆರಂಭವಾಗಿದ್ದು, 1 ರಿಂದ 5 ನೇ ತರಗತಿ ಮಕ್ಕಳಿಗೆ ಯಾವ ರೀತಿಯಲ್ಲಿ ಪಾಠ- ಪ್ರವಚನ ಮಾಡಬೇಕು ಎಂಬುದಕ್ಕಾಾಗಿ ‘ಪರ್ಯಾಯ ಶೈಕ್ಷಣಿಕ ವರ್ಷ’ ಎಂಬ ಕಾರ್ಯಕ್ರಮ ರೂಪಿಸಿದೆ.
1ರಿಂದ 5ನೇ ತರಗತಿ ಮಕ್ಕಳಿಗೆ ಒಂದೂವರೆ ವರ್ಷದಿಂದ ಭೌತಿಕ ತರಗತಿಗಳ ಕಲಿಕೆ ಸ್ಥಗಿತಗೊಂಡಿದ್ದರಿಂದ ಮಕ್ಕಳ ಮನಸ್ಥಿತಿ, ಕಲಿಕಾ ಮಟ್ಟ ತಿಳಿದು ಮುಂದಿನ ತರಗತಿಗಳಿಗೆ ಮಕ್ಕಳನ್ನು ಅಣಿಗೊಳಿಸಬೇಕಿದೆ. ಹೀಗಾಗಿ ಅವಶ್ಯಕತೆ ಇರುವಂತಹ ಕಲಿಕಾ ಅಂಶಗಳನ್ನು ಕಲಿಸುವಂತೆ ಸೂಚನೆ ನೀಡಲಾಗಿದೆ.
ಈ ಸಂಬಂಧ ಮಂಗಳವಾರ ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ದು, ಡಿಡಿಪಿಐ, ಬಿಇಒ, ಸಿಆರ್‌ಪಿ ಮತ್ತು ಬಿಆರ್‌ಪಿ ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ವರದಿಯಾಗಿದೆ.
1ರಿಂದ 5ನೇ ತರಗತಿ ಮಕ್ಕಳಿಗೆ ಕಳೆದ ವರ್ಷ ಭೌತಿಕ ತರಗತಿಗೆ ಅವಕಾಶವೇ ಸಿಕ್ಕಿಲ್ಲ. ಈ ವರ್ಷ ಅರ್ಧ ವರ್ಷ ಕಳೆದುಹೋಗಿದೆ. ಇಂತಹ ಸಮಯದಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಮಗು 6ನೇ ತರಗತಿಗೆ ಹೋಗಬೇಕಾದರೆ, ಕಲಿಯಬೇಕಾದ ಅಂಶಗಳೇನು ಎಂಬುದನ್ನು ತಿಳಿಸುವುದಕ್ಕಾಾಗಿ ಯೋಜನೆ ರೂಪಿಸಲಾಗಿದೆ.
ಒಂದು ಅಧ್ಯಾಯವನ್ನು ಸಂಪೂರ್ಣವಾಗಿ ಪಾಠ ಮಾಡುವ ಬದಲಾಗಿ ಅಧ್ಯಾಾಯದಲ್ಲಿರುವ ಪ್ರಮುಖ ಅಂಶಗಳನ್ನು ಆಯ್ದು ಮಕ್ಕಳಿಗೆ ಸಂಕ್ಷಿಪ್ತವಾಗಿ ತಿಳಿಸುವುದು. ಇದರಿಂದ ಸಮಯ ಉಳಿತಾಯವಾಗಲಿದೆ. ಜೊತೆಗೆ ಮಕ್ಕಳು ಕೂಡ ಸಂಪೂರ್ಣ ಪಾಠ ಓದುವ ಬದಲಾಗಿ ಆಯ್ದ ಅಂಶಗಳನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗಲಿದೆ.
ಆದರೆ ಮಾಸಿಕ ಪರೀಕ್ಷೆಗಳು, ಕಲಿಕಾ ಮೌಲ್ಯಮಾಪನ ಕಾರ್ಯ ಎಂದಿನಂತೆಯೇ ನಡೆಯಲಿದೆ. ಇದರ ಜೊತೆಗೆ ಮಕ್ಕಳು ಹಿಂದಿನ ವರ್ಷದಲ್ಲಿ ಯಾವ ರೀತಿಯಲ್ಲಿ ಕಲಿತಿದ್ದಾಾರೆ ಎಂಬುದರ ಮೌಲ್ಯಮಾಪನ ಕೂಡ ನಡೆಯಲಿದೆ. ಹೀಗಾದರೆ ಮಕ್ಕಳು ಮುಂದಿನ ತರಗತಿಗಳಗೆ ಬಡ್ತಿಿ ಪಡೆಯಲು ಎಷ್ಟರ ಮಟ್ಟಿಗೆ ಅರ್ಹತೆ ಹೊಂದಿದ್ದಾಾರೆ ಎಂಬ ತಿಳಿಯಲಿದೆ. ಆದರೆ, ಯಾವುದೇ ಕಾರಣಕ್ಕೂ ಪಠ್ಯವನ್ನು ಕಡಿತಗೊಳಿಸುವುದಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement