ಪುನೀತ್-ನನ್ನ ಭೇಟಿಗೆ ಇಂದು ಸಮಯ ನಿಗದಿಯಾಗಿತ್ತು…ಆದರೆ ವಿಧಿ ಬೇರೆಡೆಗೆ ಒಯ್ದಿತು: ಸಿಎಂ ಬೊಮ್ಮಾಯಿ

ಬೆಂಗಳೂರು: ಪುನೀತ್​ ರಾಜ್​ಕುಮಾರ್​ ಅವರ ನಿಧನದಿಂದ ರಾಜ್ಯವೇ ಶೋಕದಲ್ಲಿ ಮುಳುಗಿದೆ. ಪುನೀತ್​ ರಾಜ್​ಕುಮಾರ್​ ಅವರನ್ನು ದಾಖಲು ಮಾಡಿದ್ದ ವಿಕ್ರಂ ಆಸ್ಪತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ಗುರುವಾರವಷ್ಟೇ (ಅ.28) ಪುನೀತ್ ​ನನ್ನ ಜೊತೆ ದೂರವಾಣಿ ಮೂಲಕ ಮಾತನಾಡಿದ್ದರು ಎಂದು ತಿಳಿಸಿದರು.
ನನಗೆ ನಿನ್ನೆ ಫೋನ್​ ಮಾಡಿ ಪುನೀತ್​ ರಾಜ್​ಕುಮಾರ್​ ಮಾತನಾಡಿದ್ದರು. ಅವರನ್ನು ಭೇಟಿ ಮಾಡಲು ಇವತ್ತು ಸಮಯ ನಿಗದಿ ಆಗಿತ್ತು. ನವೆಂಬರ್​ 1ರಂದು ಅವರ ವೆಬ್​ಸೈಟ್​ ಉದ್ಘಾಟನೆ ಮಾಡಬೇಕು ಎಂದು ಆಹ್ವಾನ ನೀಡಲು ಅವರು ಬರಬೇಕಿತ್ತು. ಆದರೆ ವಿಧಿ ಅವರನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿದೆ. ಬಹಳ ದೊಡ್ಡ ಆಘಾತವಾಗಿದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಪುನೀತ್​ ನಿಧನದಿಂದ ಕಲಾರಂಗಕ್ಕೆ ಬಹಳ ದೊಡ್ಡ ನಷ್ಟವಾಗಿದೆ. ಚಿತ್ರರಂಗದಲ್ಲಿ ನಾಯಕತ್ವ ಗುಣ ಇರುವ ಒಬ್ಬ ನಟನನ್ನು ನಾವಿಂದು ಕಳೆದುಕೊಂಡಿದ್ದೇವೆ. ಡಾ. ರಾಜ್​ಕುಮಾರ್​ ಅವರ ಸಂಸ್ಕಾರದಲ್ಲಿ ಪುನೀತ್​ ಬೆಳೆದಿದ್ದರು. ಅವರ ನಡೆ, ನುಡಿ ಎಲ್ಲವೂ ರಾಜ್​ಕುಮಾರ್​ ರೀತಿಯೇ ಅತ್ಯಂತ ವಿನಯಪೂರ್ವಕವಾಗಿತ್ತು. ನಾನು ಎರಡು ತಿಂಗಳ ಹಿಂದೆ ಅವರು ಕರೆದು ಒಂದು ಸಭೆಗೆ ಹೋಗಿ ಎಜುಕೇಷನ್​ ಆ್ಯಪ್​ ಉದ್ಘಾಟನೆ ಮಾಡಿದ್ದೆ. ಅದಾದ ಬಳಿಕವೂ ಭೇಟಿ ಆಗಿದ್ದೆ. ಅವರು ಕುಟುಂಬದ ಜೊತೆ ನನಗೆ ಬಹಳ ವರ್ಷದಿಂದಲೂ ಒಡನಾಟ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆನಪಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement