ಡ್ರಗ್ಸ್‌ ಪ್ರಕರಣ: ಇಂದು ಜೈಲಿನಿಂದ ಬಿಡುಗಡೆಯಾದ ಆರ್ಯನ್​ ಖಾನ್

ಮುಂಬೈ: ಮುಂಬೈ ಕ್ರೂಸ್‌ ಡ್ರಗ್ಸ್​ ಪ್ರಕರಣದಲ್ಲಿ ಎನ್​ಸಿಬಿ ಅಧಿಕಾರಿಗಳ ಬಲೆಗೆ ಬಿದ್ದು ಜೈಲು ಸೇರಿದ್ದ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್​ ಖಾನ್​ ಜಾಮೀನು ಪಡೆದು ಇಂದು (ಶನಿವಾರ( ಹೊರಬಂದಿದ್ದಾರೆ.
ಬಾಂಬೆ ಹೈಕೋರ್ಟ್​ ಗುರುವಾರವೇ (ಅ.28) ಆರ್ಯನ್‌​ ಖಾನಗೆ​ ಪುತ್ರನಿಗೆ ಜಾಮೀನು ನೀಡಿತ್ತು. ಅದಕ್ಕೆ ಸಂಬಂಧಿಸಿದಂತೆ ಜೈಲಿನ ಕೆಲವು ಪ್ರಕ್ರಿಯೆಗಳು ಇಂದು ಮುಗಿದ ನಂತರ ಆರ್ಯನ್​ ಖಾನ್​ ಜೈಲಿನಿಂದ ಹೊರಗೆ ಬಂದಿದ್ದಾರೆ.
ಅ.2ರಂದು ಮಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಪಾರ್ಟಿಯಲ್ಲಿ ಆರ್ಯನ್​ ಖಾನ್​ ಕೂಡ ಭಾಗವಹಿಸಿದ್ದರಿಂದ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರನ್ನು ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸತ್ತು.. ಸುಮಾರು 25 ದಿನಗಳಿಗೂ ಹೆಚ್ಚು ದಿನಗಳ ಕಾಲ ಆರ್ಯನ್​ ಖಾನ್‌ ಅವರು ಮುಂಬೈನ ಆರ್ಥರ್​ ರೋಡ್​ ಜೈಲಿನಲ್ಲಿ ಇದ್ದರು. ಈಗ ಜಾಮೀನನ ಮೇಲೆ ಹೊರಗೆ ಬಂದಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement