ಸೂಪರ್‌ ಸ್ಟಾರ್‌ ರಜನೀಕಾಂತಗೆ ಕ್ಯಾರೋಟಿಡ್ ಎಂಡಾರೆಕ್ಟಮಿ ಚಿಕಿತ್ಸೆ

ಚೆನ್ನೈ : ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದು ಸೂಪರ್‌ ಸ್ಟಾರ್‌ ರಜನೀಕಾಂತ ಅಕ್ಟೋಬರ್ 29, ಶುಕ್ರವಾರದಂದು ಶೀರ್ಷಧಮನಿ ರಿವಾಸ್ಕುಲಲೈಸೇಶನ್‌ (carotid artery revascularization) ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚೆನ್ನೈನ ಕಾವೇರಿ ಆಸ್ಪತ್ರೆ ತಿಳಿಸಿದೆ.
ಕೆಲವು ದಿನಗಳ ನಂತರ ರಜನಿಕಾಂತ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಆಸ್ಪತ್ರೆಯು ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ರಜನಿಕಾಂತ್ ಅವರು ನಿನ್ನೆ (28 ನೇ ಅಕ್ಟೋಬರ್ 2021) ತಲೆತಿರುಗುವಿಕೆಯ ಅನುಭವದ ನಂತರ ಚೆನ್ನೈನ ಆಳ್ವಾರ್‌ಪೇಟ್‌ನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ತಜ್ಞರ ತಂಡ ಅವರನ್ನು ಸಂಪೂರ್ಣವಾಗಿ ಮೌಲ್ಯಮಾಪನ ಮಾಡಿತು ಮತ್ತು ಶೀರ್ಷಧಮನಿ ರಿವಾಸ್ಕುಲರೈಸೇಶನ್‌ಗೆ ಒಳಗಾಗಲು ಸಲಹೆ ನೀಡಲಾಯಿತು. ಈ ವಿಧಾನವನ್ನು ಶುಕ್ರವಾರ ಯಶಸ್ವಿಯಾಗಿ ನಡೆಸಲಾಯಿತು ಮತ್ತು ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ನಟ ರಜನೀಕಾಂತ್ ಅವರನ್ನು ಅಕ್ಟೋಬರ್ 28 ರಂದು ಕೌವರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಜನೀಕಾಂತ್ ಆಸ್ಪತ್ರೆಗೆ ದಾಖಲಾದ ಕಾರಣದಿಂದ ಅಭಿಮಾನಿಗಳು ಆತಂಕದಲ್ಲಿದ್ದರು. ಆದರೆ ನಟ ರಜನೀಕಾಂತ್ ಚೆನ್ನೈ ಆಸ್ಪತ್ರೆಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಅವರಿಗೆ ವೈದ್ಯರ ಸಲಹೇ ಮೇರೆಗೆ ʼಕ್ಯಾರೋಟಿಡ್ ಎಂಡಾರೆಕ್ಟಮಿʼ ಚಿಕಿತ್ಸ್ತೆಯನ್ನು ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಜ್ಞ ವೈದ್ಯರು ರಜನೀಕಾಂತ್ ಅವರ ಆರೋಗ್ಯಸ್ಥಿತಿಯನ್ನು ಪರಿಶೀಲಿಸಿ ನಂತರ ಈ ಸರ್ಜರಿಯನ್ನು ಮಾಡಬೇಕು ಎಂದು ತಿಳಿಸಿದ ನಂತರ ಮರುದಿನವೇ ನಟ ರಜನೀಕಾಂತ್ ಅವರಿಗೆ ʼಕ್ಯಾರೋಟಿಡ್ ಎಂಡಾರೆಕ್ಟಮಿʼ ಸರ್ಜರಿಯನ್ನು ಮಾಡಲಾಗಿದೆ. ಮೆದುಳಿನ ನರದಲ್ಲಿ ರಕ್ತ ಬ್ಲಾಕ್ ಆದ ಸಂದರ್ಭದಲ್ಲಿ ಈ ಚಿಕಿತ್ಸೆಯನ್ನು ಮಾಡಲಾಗುತ್ತದೆ.

ಪ್ರಮುಖ ಸುದ್ದಿ :-   ನಟಿ ಅಮೃತಾ ಪಾಂಡೆ ಶವವಾಗಿ ಪತ್ತೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement