ಹಾನಗಲ್, ಸಿಂದಗಿ ಉಪಚುನಾವಣೆಗೆ ಇಂದು ಮತದಾನ

ಬೆಂಗಳೂರು: ಇಂದು ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಆರಂಭವಾಗಿದೆ. ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರ, ಜೆಡಿಎಸ್​ನಿಂದ ನಾಜಿಯಾ ಅಂಗಡಿ, ಕಾಂಗ್ರೆಸ್ ಪಕ್ಷದಿಂದ ಅಶೋಕ್ ಮನಗೂಳಿ ಕಣಕ್ಕಿಳಿದಿದ್ದಾರೆ.ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಜ ಸಜ್ಜನರ್, ಕಾಂಗ್ರೆಸ್​ನಿಂದ ಶ್ರೀನಿವಾಸ್ ಮಾನೆ, ಜೆಡಿಎಸ್​ನಿಂದ ನಿಯಾಜ್ ಶೇಖ್ ಸ್ಪರ್ಧಿಸಿದ್ದಾರೆ. ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಮತದಾನ ನಡೆಯಲಿದೆ.
ಹಾನಗಲ್‌ ಕ್ಷೇತ್ರದ ವಿವರ..:
ಹಾನಗಲ್‌ ಮತಕ್ಷೇತ್ರದಲ್ಲಿ 1,05,525 ಪುರುಷರು, 98,953 ಮಹಿಳೆಯರು, 83 ಸೇವಾ ಮತದಾರರು, ಮೂವರು ಇತರೆ ಮತದಾರರು ಸೇರಿದಂತೆ ಒಟ್ಟು 2.04,564 ಮತದಾರರು ಹಕ್ಕು ಚಲಾಯಿಸುವ ಅರ್ಹತೆ ಪಡೆದಿದ್ದಾರೆ.. ಒಟ್ಟು 263 ಮತಗಟ್ಟೆಗಳಿವೆ. 1,155 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ 33 ಸೂಕ್ಷ್ಮ ಮತ್ತು 3 ಅತಿಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 121 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಒದಗಿಸಲಾಗಿದೆ. ಒಂದು ವಿಕಲಚೇತನ ಸ್ನೇಹಿ ಮತಗಟ್ಟೆ ಮತ್ತು ಎರಡು ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬ

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಸಿಂದಗಿ ಮತಕ್ಷೇತ್ರದ ವಿವರ..
ಸಿಂದಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 2,34,584 ಜನರು ಮತದಾನ ಮಾಡಲಿದ್ದಾರೆ. 1,20,844 ಪುರುಷರು, 1,13561 ಮಹಿಳೆಯರು ಮತದಾನಕ್ಕೆ ಅರ್ಹರು. ಇತರೆ 32 ಮತದಾರರು ಹಾಗೂ 147 ಸರ್ವಿಸ್ ವೋಟರ್​ಗಳು ಮತ ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ಒಟ್ಟು 297 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
2 ಸಖಿ ಮತದಾನ ಕೇಂದ್ರ, 1 ಪಿಡಬ್ಲ್ಯೂಡಿ ಮತದಾನ ಕೇಂದ್ರ, 180 ವೆಬ್ ಕಾಸ್ಟಿಂಗ್ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತದಾನ ಕರ್ತವ್ಯಕ್ಕೆ 1,308 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement