ಅಫ್ಘಾನ್​ ಹುಡುಗಿ ಕಳುಹಿಸಿದ ಕಾಬೂಲ್​ ನದಿ ನೀರಿನಿಂದ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಜಲಾಭಿಷೇಕ ಮಾಡಿದ ಸಿಎಂ ಯೋಗಿ

ಅಯೋಧ್ಯೆ: ರಾಮಜನ್ಮಭೂಮಿಗಾಗಿ ಅಫ್ಘಾನಿಸ್ತಾನದ ಹುಡುಗಿಯೊಬ್ಬಳು ಕಳುಹಿಸಿದ್ದ ಕಾಬೂಲ್​ ನದಿಯ ನೀರಿನಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಶ್ರೀ ರಾಮಜನ್ಮಭೂಮಿಯಲ್ಲಿ ಜಲಾಭಿಷೇಕ ಮತ್ತು ಪೂಜೆ ನೆರವೇರಿಸಿದ್ದಾರೆ.
ಇಂಥದ್ದೊಂದು ವಿಶೇಷ ಘಟನೆ ಇಂದು (ಭಾನುವಾರ) ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ ಸ್ಥಳದಲ್ಲಿ ನಡೆದಿದೆ. ಬಾಲಕಿ ಕಳುಹಿಸಿದ್ದ ಕಾಬೂಲ್​ ನದಿ ನೀರನ್ನು ಗಂಗಾಜಲದೊಂದಿಗೆ ಮಿಶ್ರಣ ಮಾಡಿ, ಮಂದಿರ ನಿರ್ಮಾಣದ ಜಾಗಕ್ಕೆ ಜಲಾಭಿಷೇಕ ಮಾಡಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.
ಅಫ್ಘಾನಿಸ್ತಾನದ ಹುಡುಗಿಯೊಬ್ಬಳು ಕಾಬೂಲ್​ ನದಿಯ ನೀರನ್ನು ಪ್ರಧಾನಿ ಮೋದಿಯವರಿಗೆ ಕಳುಹಿಸಿದ್ದಳು. ಅದನ್ನು ಅಯೋಧ್ಯೆ ಶ್ರೀರಾಮ ಜನ್ಮಭೂಮಿಗೆ ಸಮರ್ಪಿಸಬೇಕು ಎಂಬುದು ಅವಳ ಬಯಕೆಯಾಗಿತ್ತು. ಅದರಂತೆ ನಡೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಶುರುವಾಗಿದೆ. ಆದರೂ ಈ ಮಧ್ಯೆ ಅಲ್ಲಿನ ಕೆಲವರು ಭಾರತ ಮತ್ತು ಇಲ್ಲಿನ ದೇವಸ್ಥಾನದ ಬಗ್ಗೆ ಪವಿತ್ರ ಭಾವನೆ ಹೊಂದಿದ್ದಾರೆ. ಅವರ ಭಾವನೆಗೆ ಬೆಲೆ ಕೊಡುವುದು ತುಂಬ ಮುಖ್ಯ. ಇಂದು ದೀಪೋತ್ಸವ ಸಿದ್ಧತೆ ಪರಿಶೀಲನೆ ಇದ್ದರೂ ಕೂಡ, ನನ್ನ ಮೊದಲ ಆದ್ಯತೆ, ಬಾಲಕಿ ಕಳುಹಿಸಿದ ಕಾಬೂಲ್​ ನದಿ ನೀರನ್ನು ಶ್ರೀರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಸಮರ್ಪಿಸುವುದೇ ಆಗಿತ್ತು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement