ಅಮೆಜಾನ್ ಕಂಪನಿಗೆ ಸೇರಿದ ಕಂಟೇನರ್ ಅಪಹರಣ;1.50 ಕೋಟಿ ರೂಪಾಯಿ ಮೌಲ್ಯದ ವಸ್ತುಗಳ ದರೋಡೆ

ಕೋಲಾರ: ಅಮೆಜಾನ್ ಕಂಪನಿಗೆ ಸೇರಿದ ಕಂಟೇನರ್ ಲಾರಿ ಅಪಹರಿಸಿ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು, ಹೊಂ ಅಪ್ಲೇಯನ್ಸಸ್ ವಸ್ತುಗಳು ಸೇರಿ ಒಂದೂವರೆ ಕೋಟಿ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ ಘಟನೆ ಕೋಲಾರ ತಾಲ್ಲೂಕಿನ ನಾಗಲಾಪುರ ಗೇಟ್ ಬಳಿ ನಡೆದ ಬಗ್ಗೆ ವರದಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಕಡೆಯಿಂದ ಹೊಸಕೋಟೆ ತಾಲೂಕಿನ ಅನಗೊಂಡನಹಳ್ಳಿ ಬಳಿಯ ಫ್ಯಾಕ್ಟರಿಗೆ ತೆರಳುತ್ತಿದ್ದ ಕಂಟೇನರ್ ಲಾರಿಯನ್ನು ಅಪಹರಿಸಿದ್ದು, ಅದರಲ್ಲಿದ್ದ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಲಾಗಿದೆ.
ಕೋಲಾರ ತಾಲ್ಲೂಕಿನ ನಾಗಲಾಪುರ ಗೇಟ್ ಬಳಿ ಲಾರಿ ಬಿಟ್ಟು ದರೋಡೆಕೋರರು ಪರಾರಿಯಾಗಿದ್ದು, ಅಮೆಜಾನ್ ಕಂಪನಿಗೆ ಸೇರಿದ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು, ಹೊಂ ಅಪ್ಲೇಯನ್ಸಸ್ ವಸ್ತುಗಳು ಸೇರಿ ಒಂದೂವರೆ ಕೋಟಿ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದಾರೆ. ಕಳ್ಳರು ಕಂಟೇನರ್‌ನಲ್ಲಿದ್ದ ಜಿಪಿಎಸ್ ಕಿತ್ತು ಎಸೆದು ಕೃತ್ಯವೆಸಗಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿ ಕಂಟೇನರ್ ಚಾಲಕ ನಾಪತ್ತೆಯಾಗಿದ್ದಾನೆ.  ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement