ಕೊವಿಡ್ ಲಸಿಕೆ ಬೆಲೆ 265 ರೂ.ಗಳಿಗೆ ಇಳಿಸಲು ಝೈಡಸ್ ಕ್ಯಾಡಿಲಾ ಒಪ್ಪಿಗೆ, ಶೀಘ್ರವೇ ಅಂತಿಮ ನಿರ್ಧಾರ: ವರದಿ

ನವದೆಹಲಿ: ಝೈಡಸ್ ಕ್ಯಾಡಿಲಾ ತನ್ನ ಕೊವಿಡ್ -19 ಲಸಿಕೆ ಬೆಲೆಯನ್ನು 265 ರೂ.ಗಳಿಗೆ ಇಳಿಸಲು ಒಪ್ಪಿಕೊಂಡಿದೆ. ಆದರೆ ಸರ್ಕಾರದ ನಿರಂತರ ಮಾತುಕತೆಗಳ ನಂತರ ಇನ್ನೂ ಅಂತಿಮ ಒಪ್ಪಂದ ಅಂತಿಮವಾಗಿಲ್ಲ  ಎಂದು ವರದಿಗಳು ಹೇಳಿದೆ.
ಝೈಡಸ್ ಕ್ಯಾಡಿಲಾ (Zydus Cadila) ಅವರ ZyCov-D 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನಿರ್ವಹಣೆ ನೀಡಲು ಭಾರತದ ಔಷಧ ನಿಯಂತ್ರಕದಿಂದ ಅನುಮತಿ ಪಡೆದ ಮೊದಲ ಲಸಿಕೆಯಾಗಿದೆ.
ಸೂಜಿ-ಮುಕ್ತ ಲಸಿಕೆಯನ್ನು ನೀಡಲು ಪ್ರತಿ ಡೋಸ್‌ಗೆ  93 ರೂ.ವೆಚ್ಚದ ಉಪಯೋಗಿಸಿ ಬಿಸಾಡಬಹುದಾದ ನೋವುರಹಿತ ಜೆಟ್ ಅಪ್ಲಿಕೇಟರ್ ಅಗತ್ಯವಿದೆ, ಇದು ಪ್ರತಿ ಡೋಸ್‌ಗೆ 358 ರೂ. ಆಗಿದೆ. ಅಹಮದಾಬಾದ್ ಮೂಲದ ಫಾರ್ಮಾ ಕಂಪನಿಯು ಈ ಹಿಂದೆ ತನ್ನ ಮೂರು-ಡೋಸ್ ರೆಜಿಮೆನ್ ಬೆಲೆ 1,900 ರೂ ಎಂಬ ಪ್ರಸ್ತಾಪವನ್ನು ಇಟ್ಟಿತ್ತು ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಜೊತೆ ಅನೇಖ ಹಂತದ ಮಾತುಕತೆಗಳ ನಂತರ ಕಂಪನಿಯು ಪ್ರತಿ ಡೋಸ್‌ಗೆ ಬೆಲೆಯನ್ನು 358 ರೂ.ಗಳಿಗೆ ಇಳಿಸಿದೆ.  ಈ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ಈ ವಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಬೆಳವಣಿಗೆಗಳ ಮೂಲವೊಂದು ತಿಳಿಸಿದೆ ಎಂದು ವರದಿಗಳು ತಿಳಿಸಿವೆ. ಮೂರು ಡೋಸ್‌ಗಳನ್ನು 28 ದಿನಗಳ ಅಂತರದಲ್ಲಿ ನಿರ್ವಹಿಸಬೇಕು. ಎರಡೂ ತೋಳುಗಳಿಗೂ ಲಸಿಕೆ ನೀಡಲಾಗುತ್ತದೆ.
ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ವಿಶ್ವದ ಮೊದಲ ಡಿಎನ್‌ಎ-ಆಧಾರಿತ ಸೂಜಿ-ಮುಕ್ತ ಕೊವಿಡ್-19 ಲಸಿಕೆ ZyCoV-D ಆಗಸ್ಟ್ 20 ರಂದು ಔಷಧ ನಿಯಂತ್ರಕದಿಂದ ತುರ್ತು ಬಳಕೆಯ ಅಧಿಕಾರವನ್ನು ಪಡೆಯಿತು.
ಏತನ್ಮಧ್ಯೆ, ಸಹ-ಅಸ್ವಸ್ಥತೆ ಹೊಂದಿರುವ ವಯಸ್ಕರು ಮತ್ತು ಮಕ್ಕಳಿಗೆ ಇನಾಕ್ಯುಲೇಷನ್ ಡ್ರೈವ್‌ನಲ್ಲಿ ZyCoV-D ಅನ್ನು ಪರಿಚಯಿಸಲು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ( NTAGI) ಶಿಫಾರಸುಗಳಿಗಾಗಿ ಸರ್ಕಾರ ಇನ್ನೂ ಕಾಯುತ್ತಿದೆ.

ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement