ನನ್ನ ಮಗನನ್ನೇ ಕಳೆದುಕೊಂಡೆ : ಪುನೀತ್‌ ನಿಧನಕ್ಕೆ ಶಿವಣ್ಣ ಕಂಬನಿ

ಬೆಂಗಳೂರು: ಅಪ್ಪು ಇಲ್ಲ ಎಂದು ಹೇಳಲು ಮನಸ್ಸು ಒಪ್ಪುತ್ತಿಲ್ಲ. ಇಲ್ಲೇ ಎಲ್ಲೋ ಹೋಗಿರಬೇಕು ಬರ್ತಾನೆ ಎಂದು ಅನಿಸ್ತದೆ.
ನಟ ಪುನೀತ್ ರಾಜಕುಮಾರ್ ನಿಧನದಿಂದ ಆಘಾತಕ್ಕೆ ಒಳಗಾಗಿ ಮೌನವಾಗಿದ್ದು ಅಂತ್ಯಕ್ರಿಯೆ ಬಳಿಕ ಹಿರಿಯ ನಟ ಹಾಗೂ ಸಹೋದರ ಶಿವರಾಜ್ ಕುಮಾರ್ ಹೇಳಿದ್ದು ಹೀಗೆ.
ಪುನೀತ್ ಕಳೆದುಕೊಂಡಿರುವುದು ಮಗನನ್ನೇ ಕಳೆದುಕೊಂಡಷ್ಟು ನೋವಾಗಿದೆ. ನನಗಿಂತ ಹದಿಮೂರು ವರ್ಷ ಚಿಕ್ಕವನು. ಇಡೀ ಕುಟುಂಬವೇ ಆತನ ಕುಟುಂಬದ ಜೊತೆಗಿರುತ್ತೇವೆ. ಪುನೀತ್ ಕನಸು ಈಡೇರಿಸುತ್ತೇವೆ ಎಂದು ಹೇಳಿದರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದಾಗಿ ಕುಟುಂಬದ ಸದಸ್ಯರು ವಿಧಿವಿಧಾನಗಳನ್ನು ಯಾವುದು ಗೊಂದಲಗಳಿಲ್ಲದೆ ಸಂಪೂರ್ಣವಾಗಿ ಮಾಡಲು ಸಾಧ್ಯವಾಯಿತು.ಇದಕ್ಕಾಗಿ ಸರ್ಕಾರ ,ಪೊಲೀಸ್ ಇಲಾಖೆ ಹಾಗೂ ಅಭಿಮಾನಿಗಳು ಮಾಧ್ಯಮಗಳು ಸಹಕಾರ ಮರೆಯುವುದಿಲ್ಲ . ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ಸಮಾಧಿಗೆ ಹಾಲುತುಪ್ಪ ಬಿಡುವ ತನಕ ಅಭಿಮಾನಿಗಳಿಗೆ ಸಮಾಧಿ ಜಾಗಕ್ಕೆ ಹೋಗಲು ಅವಕಾಶ ನೀಡುವುದಿಲ್ಲ. ದಯವಿಟ್ಟು ಸಹಕರಿಸಬೇಕು. ಅದು ಮುಗಿದ ನಂತರ ಶೀಘ್ರವೇ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.
ಅಭಿಮಾನಿಗಳು ಕುಟುಂಬದ ಮೇಲಿರುವ ಪ್ರೀತಿಗೆ ಬೆಲೆ ಕಟ್ಟಲು ಆಗುವುದಿಲ್ಲ. ಅಪ್ಪು ನನ್ನಲ್ಲಿ ಹಾಗೂ ರಾಘುವಿನಲ್ಲಿ ಕುಟುಂಬದ ರೂಪದಲ್ಲಿ, ಹಾಗೂ ಚಿತ್ರರಂಗದ ರೂಪದಲ್ಲಿ ಸದಾ ಜೀವಂತವಾಗಿ ಇರಲಿದ್ದಾನೆ ಎಂದು ತಿಳಿಸಿದರು.
ಯಾರೂ ಬಾವೋದ್ವೇಗಕ್ಕೆ ಒಳಗಾಗಿ ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಡಿ. ನಿಮ್ಮದು ಕುಟುಂಬವಿದೆ ಅದರ ಕಡೆ ಗಮನ ಹರಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು. ನಮ್ಮ ಕುಟುಂಬಕ್ಕೆ ನಾವು ಇರಬೇಕು ಎಂಬ ಜವಾಬ್ದಾರಿ ನಿಮಗಿರಲಿ. ನೋವನ್ನು ನುಂಗಿ ಸಾಗುವುದೇ ಜೀವನ ಎಂದು ಮಾರ್ಮಿಕವಾಗಿ ಹೇಳಿದರು.

ಪ್ರಮುಖ ಸುದ್ದಿ :-   41.8 ಡಿಗ್ರಿ ತಲುಪಿದ ಬೆಂಗಳೂರು ತಾಪಮಾನ ; ರಾಜ್ಯದ ಈ ಜಿಲ್ಲೆಗಳಲ್ಲಿ ನಾಲ್ಕೈದು ದಿನ ಬಿಸಿಗಾಳಿ ಮುನ್ನೆಚ್ಚರಿಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement