ನಟ ಪುನೀತ್‌ ರಾಜಕುಮಾರಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ಅಕಾಲಿಕ ಮರಣ ಹೊಂದಿದ ಪ್ರತಿಭಾವಂತ ಸಿನೆಮಾ ನಟ ಪುನೀತ್‌ ರಾಜಕುಮಾರ ಅವರಿಗೆ ಅವರಿಗೆ ಪದ್ಮಶ್ರೀ ಪ್ರಶಸ್ತಿ (padmashri award) ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತುಮಕೂರಿನ ಗುಬ್ಬಿಯಲ್ಲಿ ಮಾತನಾಡಿದ ಅವರು, ತಾನು ಈ ಸಂಬಂಧ ಕೇಂದ್ರ ಸರ್ಕಾರ ಪತ್ರ ಬರೆಯಲಿದ್ದೇನೆ ಎಂದು ತಿಳಿಸಿದರು. ಪುನೀತ್ ರಾಜ್ ಕುಮಾರ್ ಅವರದ್ದು ಅವರದ್ದು ಸಾಯುವ ವಯಸ್ಸಲ್ಲ. ಪ್ರತಿಭಾವಂತ ಸಿನಿಮಾ ನಟ ಪುನೀತ್​ಗೆ ಕಲೆ ರಕ್ತಗತವಾಗಿ ಬಂದಿತ್ತು. ರಾಜ್ ಕುಮಾರ್ ದೇಶಕಂಡ ಶ್ರೇಷ್ಠ ನಟ. ಅದಕ್ಕೆ ಅವರಿಗೆ ಫಾಲ್ಕೆ ಪ್ರಶಸ್ತಿ ರಾಜ್ ಕುಮಾರ್ ರಿಗೆ ಸಿಕ್ಕಿತ್ತು. ಇತ್ತಿಚೆಗೆ ರಜನಿಕಾಂತ್ ಅವರಿಗೆ ಈ ವರ್ಷ ದೊರಕಿದೆ. ಅವರು ಕನ್ನಡಿಗರೇ. ಪುನೀತ ಅವರ ಪ್ರತಿಭೆಗೆ ಮರಣೋತ್ತರವಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಪುನೀತರಾಜಕುಮಾರ್ ಸಜ್ಜನ ಸರಳ ವಿನಿಯವಂತಿಕೆ ಇದ್ದ ವ್ಯಕ್ತಿ. ಡಾ.ರಾಜಕುಮಾರ ಅವರಲ್ಲಿದ್ದ ಗುಣಗಳು ಪುನೀತ್ ಗೆ ಇತ್ತು. ಅಧಿಕಾರ ಬರುತ್ತದೆ ಹೋಗುತ್ತದೆ, ಅದು ಶಾಶ್ವತವಲ್ಲ. ಆದರೆ ನಾವು ಗಳಿಸಿದ ಗೌರವ ಹಾಗೂ ಮೌಲ್ಯ ಶಾಶ್ವತ. ಆ ಮೌಲ್ಯ ರಾಜ್ ಕುಮಾರ್ ಹಾಗೂ ಅವರ ಕುಟುಂಬಕ್ಕೆ ಇದೆ. ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಪ್ರೀತಿ ಗಳಿಸಿದ್ದ ನಟ ಪುನೀತ್ ರಾಜ್‍ಕುಮಾರ್. ಅಪಾರ ಜನರು ಅಂತಿಮ ದರ್ಶನ ಮಾಡಿದ್ದಾರೆ. ಬಹಳ ಜನರು ಸಂಕಟ ಪಟ್ಟಿದ್ದಾರೆ, ಇಂಥ ಮಹಾನ್‌ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಿ ೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.

ಪ್ರಮುಖ ಸುದ್ದಿ :-   ಸೋಂದಾ‌ ಸ್ವರ್ಣವಲ್ಲೀ‌ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ ಆರಂಭ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement