ಕಮರ್ಷಿಯಲ್​ ಎಲ್​​ಪಿಜಿ ಸಿಲಿಂಡರ್​ ಬೆಲೆ ಬರೋಬ್ಬರಿ 265 ರೂ.ಹೆಚ್ಚಳ; ಬಹುತೇಕ ಕಡೆ 2 ಸಾವಿರದ ಗಡಿ ದಾಟಿದ ದರ

ನವದೆಹಲಿ:ದೀಪಾವಳಿ ಸಂಭ್ರಮದ ಮೂಡ್​​ನಲ್ಲಿರುವ ದೇಶದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆ ಶಾಕ್​. ಸತತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್​-ಡೀಸೆಲ್​ ಜತೆ ಇದೀಗ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​​ ಬೆಲೆಯಲ್ಲಿ ಭರ್ಜರಿ ಹೆಚ್ಚಳ ಮಾಡಲಾಗಿದೆ. 14.5 ಕೆಜಿಯ ಮನೆ ಬಳಕೆ ಸಿಲಿಂಡರ್​ ದರದಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ. ಬದಲಾಗಿ 19 ಕೆಜಿಯ ಕಮರ್ಷಿಯಲ್​ ಎಲ್​​ಪಿಜಿ ಸಿಲಿಂಡರ್​ಗಳ ಬೆಲೆ ಬರೋಬ್ಬರಿ 265 ರೂಪಾಯಿ ಹೆಚ್ಚಾಗಿದೆ.
ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್​ ಬೆಲೆ ಇಂದಿನಿಂದ 265 ರೂ.ಹೆಚ್ಚಾದ ಬಳಿಕ ದೆಹಲಿಯಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಸಿಲೆಂಡರ್ ಗೆ 2 ಸಾವಿರ ರೂಪಾಯಿ 50 ಪೈಸೆ ನೀಡಬೇಕು.
ಈ ಹಿಂದೆ 1733 ರೂಪಾಯಿ ಇತ್ತು. ಹಾಗೇ ಮುಂಬೈನಲ್ಲಿ 1,683 ರೂಪಾಯಿ ಇದ್ದ 19 ಕೆಜಿ ಕಮರ್ಷಿಯಲ್​ ಎಲ್​​ಪಿಜಿ ಸಿಲಿಂಡರ್​ ಬೆಲೆ ಈಗ 1950ರೂಪಾಯಿಗೆ ಏರಿದೆ. ಕೋಲ್ಕತ್ತದಲ್ಲಿ 2073ರೂ.ಗೆ ಏರಿಕೆಯಾಗಿದ್ದು, ಚೆನ್ನೈನಲ್ಲಿ 2133 ರೂಪಾಯಿ ಆಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾಗುತ್ತಿದ್ದಂತೆ ಹೊಟೇಲ್ ಗಳಲ್ಲಿ ಆಹಾರ ಪದಾರ್ಥಗಳ ಬೆಲೆ, ಬೇಕರಿಗಳಲ್ಲಿನ ತಿಂಡಿ-ತಿನಿಸುಗಳಲ್ಲಿ ಸಹ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಮನೆಬಳಕೆ ಸಿಲಿಂಡರ್​​ ದರದಲ್ಲಿ ಇಲ್ಲ ಬದಲಾವಣೆ
ಇರುವುದರಲ್ಲಿ ಒಂದು ಸಮಾಧಾನ ಎಂದರೆ 14.2 ಕೆಜಿ ತೂಕದ ಮನೆ ಬಳಕೆ ಎಲ್​ಪಿಜಿ ಸಿಲಿಂಡರ್​​ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ದೆಹಲಿಯಲ್ಲಿ 14.2 ಕೆಜಿ ತೂಕದ ಎಲ್​ಪಿಜಿ ಸಿಲಿಂಡರ್​ ಬೆಲೆ (ಸಬ್ಸಿಡಿ ರಹಿತ) 899.50 ರೂ. ಇದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement