ನಾಳೆ ಪುನೀತ್ ಸಮಾಧಿಗೆ ಕುಟುಂಬಸ್ಥರಿಂದ ಹಾಲು ತುಪ್ಪ ಕಾರ್ಯ: ಕಂಠೀರವ ಸ್ಟುಡಿಯೋ ಬಳಿ ಬಿಗಿ ಭದ್ರತೆ

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ ನಾಲ್ಕು ದಿನ ಕಳೆದಿದ್ದು, 5ನೇ ದಿನವಾದ ಮಂಗಳವಾರ ಹಾಲು ತುಪ್ಪ ಕಾರ್ಯ ನಡೆಯಲಿದ್ದು, ಅದು ಮುಗಿಯುವವರೆಗೂ ಸಮಾಧಿ ವೀಕ್ಷಣೆಗೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿದೆ. ನಾಳೆ ಸಮಾಧಿ ವೀಕ್ಷಣೆಗಾಗಿ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ಸಾಧ್ಯತೆ ಇರುವ ಕಾರಣ ಕಂಠೀರವ ಸ್ಟೂಡಿಯೋ ಬಳಿ ಪೊಲೀಸರು ಬಿಗಿ ಭದ್ರತೆಗೊಳಿಸಿದ್ದಾರೆ.
ಈಗಾಗಲೇ ಪುನೀತ್ ಅವರ ಅನೇಕ ಅಭಿಮಾನಿಗಳು ಕಂಠೀರವ ಸ್ಟುಡಿಯೋಸ್ ಬಳಿ ಬಂದು ವಾಪಸ್ ಆಗುತ್ತಿದ್ದಾರೆ. ನಾಳೆ ಅಪ್ಪು ಸಮಾಧಿಗೆ ಕುಟುಂಬಸ್ಥರು ಹಾಲುತುಪ್ಪ ಕಾರ್ಯನೆರವೇರಿಸಲಿದ್ದು, ಕೇವಲ ಆಹ್ವಾನಿತರು ಹಾಗೂ ಕುಟುಂಬ ಸದಸ್ಯರನ್ನ ಹೊರತುಪಡಿಸಿ ಬೇರೆ ಯಾರೂ ಸಹ ಕಂಠೀರವ ಸ್ಟುಡಿಯೋ ಒಳಗೆ ಬರುವಂತಿಲ್ಲ. ಹೀಗಾಗಿ ಕಂಠೀರವ ಸ್ಟುಡಿಯೋ ಬಳಿ ಸಂಪೂರ್ಣ ಬ್ಯಾರಿಗೇಡ್ ಹಾಕಲಾಗಿದೆ. ಆರ್‌ಎಎಫ್ ಕಮಾಂಡೋ ಪಡೆ, ಎರಡು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.

0 / 5. 0

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ ವೇಳೆ ಬಿಜೆಪಿಗೆ ಶಾಕ್ : ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ

ನಿಮ್ಮ ಕಾಮೆಂಟ್ ಬರೆಯಿರಿ

advertisement