ಅಯೋಧ್ಯೆ ದೀಪೋತ್ಸವ ವಿಶ್ವ ದಾಖಲೆ ಬರೆಯಲು ಸಜ್ಜು: ಪ್ರಜ್ವಲಿಸಲಿವೆ 12 ಲಕ್ಷ ದೀಪಗಳು…!

ಅಯೋಧ್ಯೆ : ಹಿಂದಿನ ವರ್ಷದ ದೀಪಾವಳಿಯ ವಿಶ್ವ ದಾಖಲೆಯನ್ನು ಉತ್ತಮ ಗೊಳಿಸುವ ಉದ್ದೇಶದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಅಯೋಧ್ಯೆಯಲ್ಲಿ 12 ಲಕ್ಷ ಮಣ್ಣಿನ ದೀಪಗಳನ್ನು (Light 12 Lakh Lamps in Ayodhya ) ಬೆಳಗಿಸಲಿದೆ. ಈ ಪೈಕಿ ಒಂಬತ್ತು ಲಕ್ಷ ದೀಪಗಳು ಸರಯು ನದಿಯ ದಡದಲ್ಲಿ ಬೆಳಗಲಿದೆ ಎಂದು ತಿಳಿಸಲಾಗಿದೆ.
ಕಳೆದ ವರ್ಷ ಅಯೋಧ್ಯೆಯಲ್ಲಿ ದೀಪೋತ್ಸವ”ದ ಸಮಯದಲ್ಲಿ 6 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸಲಾಗಿತ್ತು. ಇದು ವಿಶ್ವ ದಾಖಲೆಯನ್ನು ಸೃಷ್ಟಿಸಿತ್ತು. ರಾಮ್ ಲೀಲಾಸ್, ತ್ರೀಡಿ ಹೋಲೋಗ್ರಾಫಿಕ್ ಪ್ರದರ್ಶನ, ಲೇಸರ್ ಶೋ ಮತ್ತು ಪಟಾಕಿಗಳ ಪ್ರದರ್ಶನವು ಸೋಮವಾರದಿಂದ ಪ್ರಾರಂಭವಾಗುತ್ತದೆ ಎಂದು ಸರ್ಕಾರ ಹೇಳಿಕೆ ನೀಡಿದೆ.
ಒಟ್ಟು 5 ದಿನಗಳ ಕಾಲ ಈ ಎಲ್ಲಾ ಪ್ರದರ್ಶನ ನಡೆಯಲಿದೆ. ಸರಯು ನದಿಯ ದಡದಲ್ಲಿ 9 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು ಹಾಗೂ ಉಳಿದ 3 ಲಕ್ಷ ದೀಪಗಳನ್ನು ನವೆಂಬರ್ 3 ರಂದು ಸಂಜೆ 6 ರಿಂದ 6.30 ರವರೆಗೆ ಅಯೋಧ್ಯೆಯ ಕೆಲವು ಭಾಗಗಳಲ್ಲಿ ಬೆಳಗಿಸಲಾಗುವುದು.
ನವೆಂಬರ್ 1 ರಿಂದ 5 ರ ವರೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಶ್ರೀರಾಮ ಲೀಲೆಯನ್ನು ಪ್ರದರ್ಶಿಸಲು ಶ್ರೀಲಂಕಾದ ಸಾಂಸ್ಕೃತಿಕ ತಂಡವನ್ನು ಆಹ್ವಾನಿಸಲಾಗಿದೆ. ಸೋಮವಾರ, ನೇಪಾಳದ ಜನಕ್ ಪುರದ ತಂಡವು ರಾಮ ಲೀಲಾವನ್ನು ಪ್ರದರ್ಶಿಸಲಿದೆ ಎಂದು ಮಾಹಿತಿ ನೀಡಲಾಗಿದೆ.
ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಅಸ್ಸಾಂ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ತಂಡಗಳನ್ನು ಸಹ 5 ದಿನಗಳ ಆಚರಣೆಯ ಸಂದರ್ಭದಲ್ಲಿ ಪಾಲುಗೊಳ್ಳಲಿವೆ. ನವೆಂಬರ್ 3 ರಂದು “ದೀಪೋತ್ಸವ” ನಡೆಯಲಿದ್ದು. ಉದ್ಘಾಟನಾ ಸಮಾರಂಭವು ಭವ್ಯವಾದ ಲೇಸರ್ ಶೋ ಮತ್ತು ಗೋಮತಿ ‘ಆರತಿ’ಯಿಂದ ನಡೆಯಲಿದೆ. ಸ್ಥಳವು ಸುಮಾರು 1,500 ಸ್ಟಾಲ್‌ಗಳನ್ನು ಹೊಂದಿದೆ ಮತ್ತು ಜನರು ಅವಧಿ ಪಾಕಪದ್ಧತಿಗಳನ್ನು ಆನಂದಿಸಬಹುದಾದ ಆಹಾರ ಪ್ರಾಗಂಣಗಳನ್ನು ಸಹ ಹೊಂದಿದೆ .ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲ ಆನಂದಿ ಬೆನ್ ಪಟೇಲ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಮುಖ್ಯಮಂತ್ರಿಗಳು ಸರಯು ಆರತಿಯನ್ನೂ ನೆರವೇರಿಸಲಿದ್ದಾರೆ ಎಂದು ಸರ್ಕಾರ ಹೇಳಿಕೆ ನೀಡಿದೆ.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement