ಸಿಂದಗಿ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಯ ರಮೇಶ ಭೂಸನೂರ ಭರ್ಜರಿ ಗೆಲುವು

ವಿಜಯಪುರ: ಸಿಂದಗಿ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಭರ್ಜರಿ ಜಯಗಳಿಸಿದ್ದಾರೆ.
36 ವರ್ಷದ ರಮೇಶ್ ಭೂಸನೂರ (Bhusanur Ramesh Balappa) 31,185 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್‌ ವಿರುದ್ಧ ಜಯಸಾಧಿಸಿದ್ದಾರೆ.

ರಮೇಶ ಭೂಸನೂರ 93,865 ಮತ ಲಭಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿಗೆ 62,680 ಮತ ಲಭ್ಯವಾಗಿದೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕೇವಲ 4,353 ಮತಗಳಿಗೆ ತೃಪ್ತಿಯಾಗಬೇಕಾಗಿ ಬಂದಿದೆ. ನೋಟಾಗೆ 1,031 ಮತಗಳ ಚಲಾವಣೆ ಆಗಿದೆ
ಕರ್ನಾಟಕ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಉಪಚುನಾವಣೆ ನಡೆದಿತ್ತು. ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳು ಹೀಗಿವೆ:
ಮುಂದಿನ ಸಾರ್ವತ್ರಿಕ ಚುನಾವಣೆ ಸನಿಹದಲ್ಲೇ ಇರುವಾಗ ಪ್ರಾಮುಖ್ಯತೆ ಪಡೆದಿದ್ದ ಈ ಉಪಚುನಾವಣೆ ಗಮನಾರ್ಹವಾಗಿತ್ತು. ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಪರ ಕಳೆದ ಬಾರಿಯ ಕಡಿಮೆ ಅಂತರದ ಸೋಲಿನ ಅನುಕಂಪ ಕೆಲಸ ಮಾಡಿದೆ. ಪಂಚಮಸಾಲಿ ಮತಗಳು ಕೈ ತಪ್ಪದಂತೆ ಸಚಿವ ಸಿ.ಸಿ. ಪಾಟೀಲ್ ಹೆಗಲಿಗೆ ಜವಾಬ್ದಾರಿ ಹೊರಿಸಲಾಗಿತ್ತು. ಲಿಂಗಾಯತ ವೋಟ್ ಬ್ಯಾಂಕ್ ಗಳಿಸಲು ಸಚಿವ ವಿ. ಸೋಮಣ್ಣ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೆಲಸ ಮಾಡಿದ್ದಾರೆ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಪ್ರಭಾವ ಬೀರಿದ ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರಚಾರ ಮಾಡಿದ್ದರು. ಇಎಲ್ಲದರಿಂದ ಲಿಂಗಾಯತ ಸಮುದಾಯದ ಮತಗಳು ವರ್ಗಾವಣೆ ಆಗದಂತೆ ತಡೆಯುವಲ್ಲಿ ಸಫಲವಾಗಿದ್ದರು.
ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಸಚಿವರನ್ನು ನೇಮಿಸಿ ಕಾರ್ಯತಂತ್ರ ರೂಪಿಸಿದ್ದು, ಶಾಸಕರು ಮತ್ತು ಜಿಲ್ಲಾ ನಾಯಕರು ಗ್ರಾಮಗಳಲ್ಲೇ ವಾಸ್ತವ್ಯ ಹೂಡಿ ಮತದಾರರ ಮನವೊಲಿಕೆಯಲ್ಲಿ ಸಫಲರಾಗಿದ್ದಾರೆ. ಬಿಜೆಪಿ ನಾಯಕರ ಸಂಘಟಿತ ಪ್ರಚಾರ ಮತ್ತು ಸಿಂದಗಿ ಕ್ಷೇತ್ರದ ಅಭಿವೃದ್ಧಿಯ ವಿಚಾರ ಪ್ರಚಾರ ಮಾಡಿದ್ದು, ಹಿಂದೂಪರ ಸಂಘಟನೆಗಳು ತೆರೆಮರೆಯಲ್ಲಿ ನಡೆಸಿದ ಪ್ರಚಾರದಿಂದಾಗಿ ಹಿಂದೂ ಮತಗಳ ಕ್ರೋಢೀಕರಣವಾಗಿದ್ದು ಬಿಜೆಪಿಗೆ ವರವಾಗಿದೆ.
ಇದೇವೇಳೆ ಅನುಕಂಪದ ಮೇಲೆ ಕಣ್ಣಿಟ್ಟು ದಿವಂಗತ ಮನಗೂಳಿ ಅವರ ಮಗ ರಮೇಶ್ ಮನಗೂಳಿ ಕರೆದುಕೊಂಡು ಬಂದು ಕಾಂಗ್ರೆಸ್ ಅವರಿಗೆ ಟಿಕೆಟ್‌ ನೀಡಿತು. ಜೆಡಿಎಸ್ ನಿಂದ ಬಂದ ಅಶೋಕ್ ಗೆ ಟಿಕೆಟ್ ನೀಡಿದ್ದಕ್ಕೆ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಯಿತು. ಸ್ಥಕಾಂಗ್ರೆಸ್ ಕಾರ್ಯಕರ್ತರ ಜೊತೆ ಅಶೋಕ್ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪರ್ಯಾಯವಾಗಿ ಬೆಂಬಲಿಗರನ್ನು ಕಟ್ಟಿಕೊಂಡು ಕೆಲಸ ಮಾಡಿದರು. ಇದು ಅವರಿಗೆ ಮುಳುವಾಯಿತು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement