ಹಾನಗಲ್​ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲ್ಲುತ್ತಾರೆಂದು 1 ಎಕರೆ ಜಮೀನು, ಟ್ರಾಕ್ಟರ್ ಬೆಟ್ಟಿಂಗ್ ಕಟ್ಟಿದ ಅಭಿಮಾನಿಗಳು…!

ಹಾವೇರಿ: ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ (Srinivas Mane) ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟುತಿದ್ದಾರೆ. ಕ್ಷೇತ್ರದಲ್ಲಿ ಬೆಟ್ಟಿಂಗ್ ಆಟ ಜೋರಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದೆ ಗೆಲ್ಲುತ್ತಾರೆ ಎಂದು ಅವರ ಅಭಿಮಾನಿಯೊಬ್ಬರು ಒಂದು ಟ್ರಾಕ್ಟರ್ ಬೆಟ್ಟಿಂಗ್ ಕಟ್ಟಿದ್ದು ಮತ್ತೊಂದು ಕಡೆ ಮತ್ತೊಬ್ಬ ಅಭಿಮಾನಿ 1 ಎಕರೆ ಜಮೀನು ಬೆಟ್ಟಿಂಗ್ ಕಟ್ಟಿದ್ದಾರೆ.
ಹಾನಗಲ್ ಉಪಚುನಾವಣೆ ಕದನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರೇ ಗೆಲ್ಲುತ್ತಾರೆ ಎಂದು ಅವರ ಅಭಿಮಾನಿಯೊಬ್ಬ ಒಂದು ಎಕರೆ ಹೊಲ ಬೆಟ್ಟಿಂಗ್ ಕಟ್ಟಿದ್ದಾನೆ.
ಮಾರನಬೀಡ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಹನುಮಂತಪ್ಪ ಒಂದು ಎಕರೆ ಹೊಲ ಬೆಟ್ಟಿಂಗ್ ಕಟ್ಟಿರುವ ಇವರು ಶ್ರೀನಿವಾಸ್ ಮಾನೆ ಅವರೇ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾನೆ ಸಾಹೇಬ್ರು ಕೊರೋನಾ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಮೇಲಿನ ಅಭಿಮಾನಕ್ಕೆ ಬೆಟ್ಟಿಗ್‌ ಕಟ್ಟಿದ್ದೇನೆ. ಬಿಜೆಪಿಯವರೇ ನಮಗೆ ಚಾಲೆಂಜ್ ಮಾಡಿದ್ದಾರೆ. ಹೀಗಾಗಿ ಒಂದು ಎಕರೆ ಹೊಲ ಬೆಟ್ಟಿಂಗ್ ಕಟ್ಟಿದ್ದೇನೆ ಎಂದು ಹನುಮಂತಪ್ಪ ಹೇಳಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದೇ ಗೆಲ್ಲುತ್ತಾರೆ ಎಂದು ಅವರ ಅಭಿಮಾನಿಯೊಬ್ಬರು ಒಂದು ಟ್ರಾಕ್ಟರ್ ಬೆಟ್ಟಿಂಗ್ ಕಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement