ಗರ್ಲ್ ಫ್ರೆಂಡಿಗೆ ಖರ್ಚು ಮಾಡಲು ಸಂಬಳ ಸಾಲುತ್ತಿಲ್ಲವೆಂದು 56 ಸರಗಳ್ಳತನ ಮಾಡಿದ್ದ ಸಿವಿಲ್ ಇಂಜಿನಿಯರ್…!

ನಾಗ್ಪುರ : ಈ ಇಂಜಿನಿಜಿಯರ್‌ ಮಾಡಿದ ಕೆಲಸಕ್ಕೆ ಒಮ್ಮೆ ಹೌಹಾರಲೇಬೇಕು. ಈ ಮಹಾಶಯ ತನ್ನ ಗರ್ಲ್ ಫ್ರೆಂಡ್ ಜೊತೆ ಸುತ್ತಾಡಲು ಸಂಬಳ ಸಾಲುವುದಿಲ್ಲವೆಂದು ತನ್ನ ಸಿವಿಲ್‌ ಇಂಜಿನಿಯರಿಂಗ್‌ ಕೆಲಸ ಬಿಟ್ಟು ಸರ ಕಳ್ಳತನದ ದಂಧಗೆ ಇಳಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ವರದಿಯಾಗಿದೆ.
2015 ರಲ್ಲಿ ಸಿವಿಲ್‌ ಇಂಜಿನಿಯರಿಂಗ್‌ ಪದವಿ ಪಡೆದ ಉಮೇಶ್‌ ಪಾಟೀಲ್‌ (27 ವರ್ಷ) ನಂತರ ಕಾಂಟ್ರಾಕ್ಟರ್‌ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಕಾಂಟ್ರಾಕ್ಟರ್‌ ಕೆಲಸದಲ್ಲಿ ಬರುವ ಸಂಬಳದಲ್ಲಿ ತನ್ನ ಖರ್ಚು ಹಾಗೂ ತನ್ನ ಗೆಳತಿಯ ಖರ್ಚನ್ನು ನಿಭಾಯಿಸಲು ಆಗುತ್ತಿರಲಿಲ್ಲ. ಆದರೆ ಕಷ್ಟಪಡಲು ಮನಸ್ಸಿಲ್ಲ, ಆದರೆ ದುಡ್ಡುಬೇಕು. ಏಣು ಮಾಡುವುದೆಂದು ಯೋಚಿಸಿದ ಈ ಭೂಪ ಸುಲಭದಲ್ಲಿ ದುಡ್ಡು ಮಾಡಲು ಕಂಡುಕೊಂಡಿದ್ದು ಕಳ್ಳತನ ಮಾಡುವ ದಂಧೆ…! ಸುಲಭದಲ್ಲಿ ಹಣ ಮಾಡಬಹುದು ಎಂದು ಈ ಇಂಜಿನಿಯರ್‌ ಉಮೇಶ್‌ ಪಾಟೀಲ್‌ ಲೆಕ್ಕಾಚಾರ ಹಾಕಿಯೇ ಬಿಟ್ಟ.
ಉಮೇಶ್‌ ಪಾಟೀಲ್‌, ತುಷಾರ್‌ ದಿಲ್ಕೆ ಎನ್ನುವ ವ್ಯಕ್ತಿಯ ಜೊತೆ ಸೇರಿಕೊಂಡು 20ಕ್ಕೂ ಹೆಚ್ಚು ಚಿನ್ನದ ಸರಗಳ್ಳತನ ಮಾಡಿ ಹಣ ಸಂಪಾದನೆ ಮಾಡಿದ್ದಾನಂತೆ. ಆದರೆ ಹಣ ಹಂಚಿಕೊಳ್ಳುವ ವಿಚಾರದಲ್ಲಿ ತುಷಾರ್‌ ಮತ್ತು ಉಮೇಶ್‌ ನಡುವೆ ಜಗಳ ಬಂದ ನಂತರ ಉಮೇಶ್‌ ಛಲ ಬಿಡದ ತ್ರಿವಿಕ್ರಮನಂತೆ 2020 ರಲ್ಲಿ ಉಮೇಶ್‌ ಒಬ್ಬನೆ ಸರ ಕಳ್ಳತನವನ್ನು ಆರಂಭಿಸಿದ್ದಾನೆ. ಉಮೇಶ್‌ ಒಬ್ಬನೇ 36 ಸರಗಳ್ಳತನ ಮಾಡಿದ್ದ ಹಾಗೂ ಸುಲಭವಾಗಿ ಹಣ ಸಂಪಾದಿಸುತ್ತಿದ್ದ. ಆತನಿಗೆ ಸಿವಿಲ್‌ ಇಂಜಿನಿಯರಿಂಗ್‌ ಕಾಂಟ್ರಾಕ್ಟರ್‌ ಉದ್ಯೋಗ ಕೇವಲ ಹೆಸರಿಗೆ ಮಾತ್ರ. ನೋಡಿದವರಿಗೆ ಹೇಳಲು ಬೇಕೆಂದು ಈ ಕೆಲಸ ಮಾಡುತ್ತಿದ್ದ. ಆದರೆ ಅಸಲಿ ಕೆಲಸ ಸರಗಳ್ಳತನ.
ಅಕ್ಟೋಬರ್ 21 ರಂದು ಇಬ್ಬರು ಪೊಲೀಸರು ಪಾಟೀಲ್ ತನ್ನ ದ್ವಿಚಕ್ರ ವಾಹನದಲ್ಲಿ ನಿಧಾನವಾಗಿ ಚಲಿಸುತ್ತಿರುವುದನ್ನು ಗಮನಿಸಿದರು. ಅವರು ಅವನನ್ನು ಹಿಂಬಾಲಿಸಲು ಪ್ರಾರಂಭಿಸಿದರು. ಪಾಟೀಲ ಚಿನ್ನಾಭರಣ ಧರಿಸಿದ್ದ ಮಹಿಳೆಯಿಂದ ಸರ ಕಿತ್ತುಕೊಳ್ಳಲು ಯು ಟರ್ನ್ ತೆಗೆದುಕೊಂಡಿದ್ದಾನೆ ಪೊಲೀಸರು ವೇಗ ಹೆಚ್ಚಿಸಿ ಪಾಟೀಲ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಮೂವರು ವಾಹನಗಳಿಂದ ಬಿದ್ದು ಗಾಯಗೊಂಡಿದ್ದಾರೆ. ಆದಾಗ್ಯೂ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಎರಡು ಜಾಕೆಟ್ ಧರಿಸಿದ್ದನ್ನು ಪೊಲೀಸರು ನೋಡಿದ್ದಾರೆ. ಮೇಲಿನ ಜಾಕೆಟ್ ತೆಗೆದಾಗ ಆರೋಪಿಯ ಭುಜಕ್ಕೆ ಕಟ್ಟಿದ್ದ ಬ್ಯಾಗ್ ಪತ್ತೆಯಾಗಿದೆ. ಅವರು ಬ್ಯಾಗ್‌ನಲ್ಲಿ ನಂಬರ್ ಪ್ಲೇಟ್ ಮತ್ತು ಸ್ಕ್ರೂ ಅನ್ನು ಹೊಂದಿದ್ದ. ಅಪರಾಧ ಮಾಡಿದ ನಂತರ, ಸಿಕ್ಕಿಬೀಳುವುದನ್ನು ತಪ್ಪಿಸಲು ಅವನು ತನ್ನ ಬೈಕಿನ ನಂಬರ್ ಪ್ಲೇಟ್ ಬದಲಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಪೋಲಿಸರು ಉಮೇಶ್‌ ಪಾಟೀಲ್‌ ಮನೆಗೆ ತೆರಳಿ ಶೋಧರ್ಯ ನಡೆಸಿದ್ದಾರೆ. ಪೋಲಿಸರಿಗೆ ಉಮೇಶ್‌ ಮನೆಯಲ್ಲಿ 2.5 ಲಕ್ಷ ರೂ.ಗಳಷ್ಟು ನಗದು, 27 ಚಿನ್ನದ ಸರ ಪತ್ತೆಯಾಗಿದೆ. ಜೊತೆಗೆ ಉಮೇಶ್‌ ಪಾಟೀಲ್‌ ಸರಕಳ್ಳತನ ಮಾಡಿಯೇ ಸುಮಾರು 45 ಲಕ್ಷ ರೂ.ಗಳಷ್ಟು ಹಣದಿಂದ ಫ್ಲಾಟ್‌ ಖರೀದಿಸಿದ್ದಾನೆ. ಅಲ್ಲದೆ ಆತನ ಬ್ಯಾಂಕ್‌ ಅಕೌಂಟಿನಲ್ಲಿ 20 ಲಕ್ಷ ರೂಪಾಯಿ ಬ್ಯಾಲೆನ್ಸ್‌ ಕೂಡ ಪತ್ತೆಯಾಗಿದೆ. ಪೊಲೀಸರ ವಿಚಾರವೇಳೆ ತಾಬನೊಬ್ಬ ಸಿವಿಲ್‌ ಇಂಜಿನಿಯರ್‌, ಆದರೆ ಉದ್ಯೋಗದಲ್ಲಿದ್ದರೂ ತನ್ನ ಗೆಳತಿ ಜೊತೆ ಸುತ್ತಾಡಲು ಸಂಬಳ ಸಾಲುವುದಿಲ್ಲವೆಂದು ಈ ದಂಧೆಗೆ ಇಳಿದೆ ಎಂದು ಪೊಲೀಸರ ಮುಂದೆ ಬಾಯ್ಬಿಟ್ಟಾಗ ಪೊಲೀಸರೇ ದಂಗು ಬಡಿದಿದ್ದಾರೆ. ಈಗ ಕಂಬಿ ಎಣಿಸುತ್ತಿದ್ದಾನೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement