ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾಗಿ 5ದಿನ ಕಳೆದಿದೆ. ಆದರೆ ಈ ವೇಳೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದೆ.
ಪುನೀತ್ ಅವರ ಪಾರ್ಥಿವ ಶರೀರವನ್ನು ನೋಡಲು ಅಭಿಮಾನಿಗಳ ಜನಸಾಗರವೇ ಹರಿದು ಬಂದಿತ್ತು. ಅಪ್ಪು ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಅವಕಾಶ ಕಲ್ಪಸಿಕೊಡಲಾಗಿತ್ತು. ಈ ವೇಳೆ ಚಪ್ಪಲಿ ಹಾಕಿ ಪಾರ್ಥಿವ ಶರೀರವನ್ನು ನೋಡುವುದು ನಮ್ಮ ಸಂಸ್ಕೃತಿ ಅಲ್ಲ ಎಂದು ಸಾವಿರಾರು ಅಭಿಮಾನಿಗಳು ಚಪ್ಪಲಿ ತೆಗೆದ ಬರಿಗಾಲಿನಲ್ಲಿ ನಡೆದು ಪಾರ್ಥಿವ ಶರೀರ ನೋಡಲು ಸರದಿಯಲ್ಲಿ ಸಾಗಿದ್ದಾರೆ.
ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಲಕ್ಷಾಂತರ ಜೋಡಿ ಚಪ್ಪಲಿ ಕ್ರೀಡಾಂಗಣದಲ್ಲಿ ಬಿದ್ದಿತ್ತು. ಬೆಂಗಳೂರು ಪಾಲಿಕೆ (BBMP) ಸ್ವಚ್ಛತಾ ಸಿಬ್ಬಂದಿ ತೆರವು ಮಾಡಿದ್ದಾರೆ.
ಅಭಿಮಾನಿಗಳು ಚಪ್ಪಲಿ ತೆಗೆದು ಪುನೀತ್ ಅವರ ಪಾರ್ಥಿವ ಶರೀರಕ್ಕೆ ನಮಸ್ಕರಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರು ಹಂಚಿಕೊಳ್ಳುತ್ತಿದ್ದಾರೆ.
ಪುನೀತ್ ರಾಜ್‍ಕುಮಾರ್ ಅವರು ಸಿನಿಮಾ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಅವರು ತಮ್ಮ ಸಾವಿನ ನಂತರವೂ ಕಣ್ಣುಗಳನ್ನು ದಾನ ಮಾಡಿ ಅದನ್ನು ಈಗ ನಾಲ್ವರಿಗೆ ಅಳವಡಿಸಲಾಗಿದೆ.ಬುಧೌಆರದಿಂದ ಅಭಿಮಾನಿಗಳಿಗೆ ಪುನೀತ್ ಸಮಾಧಿಯ ದರ್ಶನವನ್ನು ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ