ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಫಲಾನುಭವಿ ಗುರುತಿಸಲು ಆಧಾರ್ ಒಂದೇ ಮಾನದಂಡವಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಒಂದು ಮಾನದಂಡವಾಗಿದ್ದು ಆದರೆ ಅದುವೇ ಏಕೈಕ ಮಾನದಂಡವಲ್ಲ ಎಂದು ಬಾಂಬೆ ಹೈಕೋರ್ಟ್‌ ಕಳೆದ ವಾರ ತಿಳಿಸಿದೆ (ಗಣಪತ್ ಧರ್ಮ ಮೆಂಗಲ್ ಮತ್ತಿತರರು ಹಾಗೂ ತಹಸೀಲ್ದಾರ್ ಕಚೇರಿ, ಮುರ್ಬಾದ್ ಮತ್ತಿತರರ ನಡುವಣ ಪ್ರಕರಣ).
ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಪ್ರಯೋಜನಗಳನ್ನು ಪಡೆಯಲು ಫಲಾನುಭವಿಯು ಅವಲಂಬಿಸಬಹುದಾದ ಮತ್ತೊಂದು ದಾಖಲೆಯಿದ್ದು ಅದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ನೀಡಲಾದ ʼಪಡಿತರ ಕಾರ್ಡ್ʼಎಂದು ನ್ಯಾಯಾಲಯ ಹೇಳಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಪ್ರದಿ ಪ್ರಕಾರ, ಫಲಾನುಭವಿಗಳನ್ನು ಗುರುತಿಸಲು ಆಧಾರ್ ಏಕೈಕ ಮಾನದಂಡವಲ್ಲ ಎಂದು ಕೇಂದ್ರ ಸರ್ಕಾರ ಫೆಬ್ರವರಿ 2017ರಲ್ಲಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ತಿಳಿಸಿದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.
ಆದ್ದರಿಂದ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಪ್ರಯೋಜನಗಳನ್ನು ಪಡೆಯಲು ಅಕ್ಟೋಬರ್ 13, 2016 ರಂದು ಮಹಾರಾಷ್ಟ್ರ ಸರ್ಕಾರ ಕೈಗೊಂಡಿದ್ದ ಸರ್ಕಾರಿ ನಿರ್ಣಯ (ಜಿಆರ್) ಫೆಬ್ರವರಿ 8, 2017 ರಂದು ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಗೆ ಸಂಪೂರ್ಣ ವ್ಯತಿರಿಕ್ತವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಆಧಾರ್‌ ಮೂಲಕ ಆರ್‌ಸಿಎಂಎಸ್ ವ್ಯವಸ್ಥೆ / ಪೋರ್ಟಲ್‌ಗೆ ಆಧಾರ್ ಕಾರ್ಡ್ ಲಿಂಕ್‌ ಪಡೆಯದ ಥಾಣೆ ಜಿಲ್ಲೆಯ ಮುರ್ಬಾದ್‌ ಪ್ರದೇಶದ ಬುಡಕಟ್ಟು ಜನರಿಗೂ ಆಹಾರ ಧಾನ್ಯ ವಿತರಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಹಾಗೂ ಪಿಡಿಎಸ್‌ ಸ್ಕೀಂನಡಿಯ ನಿಬಂಧನೆಗಳಿಗೆ ಅನುಗುಣವಾಗಿ ಬುಡಕಟ್ಟು ಜನರಿಗೆ ಆಹಾರ ಧಾನ್ಯಗಳನ್ನು ವಿತರಿಸಲು ನಾಗರಿಕ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶಿಸಿತು. ನವೆಂಬರ್ 4, 2021 ರೊಳಗೆಇಡೀ ಪ್ರಕ್ರಿಯೆಪೂರ್ಣಗೊಳಿಸಲು ಪೀಠ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement