ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಿಂದ ಸ್ಥಗಿತಗೊಂಡಿದ್ದ ಮುಸ್ಲಿಮರ ಪವಿತ್ರ ಹಜ್ ಯಾತ್ರೆಗೆ ಈ ವರ್ಷದಿಂದ ಚಾಲನೆ ನೀಡಲಾಗಿದೆ.
ಈಗ ಕೋವಿಡ್ ಸಾಂಕ್ರಾಮಿಕ ಪ್ರಸರಣ ತಗ್ಗಿರುವುದರಿಂದ ಹಜ್ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಹಜ್ ಯಾತ್ರೆಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ ಎಂದು ಅವರು ವಕ್ಫ್ ಮತ್ತು ಹಜ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
2022ರ ಹಜ್ ಯಾತ್ರೆ ಪ್ರಕ್ರಿಯೆ ಪೂರ್ಣ ಶೇ. 100ರಷ್ಟು ಆನ್‍ಲೈನ್‍ಗೊಳಿಸಲಾಗಿದೆ. ನ.1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, 2022ರ ಜ.31ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಯಾತ್ರಾರ್ಥಿಗಳು ‘ಹಜ್’ ಮೊಬೈಲ್ ಆಪ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 65 ವರ್ಷ ಮೇಲ್ಪಟ್ಟವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ.
ಅರ್ಜಿದಾರರು 2022ರ ಜನವರಿ 31ರ ಮೊದಲೇ ಪಾಸ್‍ಪೋರ್ಟ್ ಪಡೆದಿರಬೇಕು. 2022ರ ಡಿಸೆಂಬರ್ 31ವರೆಗೆ ಪಾಸ್‍ಪೋರ್ಟ್ ಮಾನ್ಯತೆ ಹೊಂದಿರಬೇಕು. 2022ರ ಫೆಬ್ರವರಿಯಲ್ಲಿ ಅರ್ಜಿಗಳ ಖುರ್ರಾ (ಲಾಟರಿ) ನಡೆಯಲಿದೆ. ಈ ವರ್ಷ ಭಾರತದಿಂದ ಕೇವಲ 10 ಎಂಬಾರ್ಕೇಶನ್ ಕೇಂದ್ರಗಳಿರಲಿವೆ. ಅನಿವಾಸಿ ಭಾರತೀಯರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿದಾರರು ಹಜ್ ಯಾತ್ರೆಗೆ ಹೊರಡುವ ಕನಿಷ್ಠ ಒಂದು ತಿಂಗಳ ಮೊದಲು ಕೋವಿಡ್-19ರ ಲಸಿಕೆ ಪಡೆದಿರಬೇಕು. 2022ರ ಮೇ 31ರಿಂದ ಹಜ್ ಯಾತ್ರಿಗಳಿಗೆ ವಿಮಾನಯಾನ ಪ್ರಾರಂಭವಾಗಲಿದೆ ಎಂದು ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ