ಅನಾಮಧೇಯ ಪತ್ರ ಪರಿಗಣಿಸದಂತೆ ರಾಜ್ಯ ಸರ್ಕಾರ ಸೂಚನೆ

ಬೆಂಗಳೂರು: ರಾಜ್ಯದ ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಅನಾಮಧೇಯ ಪತ್ರಗಳಿಗೆ ರಾಜ್ಯ ಸರ್ಕಾರ ಮಾನ್ಯತೆ ನೀಡದಿರಲು ನಿರ್ಧರಿಸಿದೆ. ಇನ್ಮುಂದೆ ಮೂಗರ್ಜಿಗಳಿಗೆ ಮಾನ್ಯತೆ ಇಲ್ಲ ಆದೇಶದಲ್ಲಿ ಸೂಚನೆ ನೀಡಿದ್ದು, ಅಧಿಕಾರಿ, ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಪರಿಗಣಿಸದಂತೆ ಸುತ್ತೋಲೆಯಲ್ಲಿ ಸೂಚಿಸಿದೆ.
ಈ ಕುರಿತು ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದು, ಮೂಗರ್ಜಿಗಳನ್ನು ಪರಿಗಣಿಸಬಾರದು. ವಿಳಾಸ ಇರುವ ದೂರುಗಳನ್ನು ಮಾತ್ರವೇ ಸ್ವೀಕರಿಸಬೇಕು. ಅಧಿಕಾರಿ, ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಮಾನ್ಯ ಮಾಡದಂತೆ ಸೂಚನೆ ನೀಡಿದೆ.
ಇನ್ಮುಂದೆ ವಿಳಾಸ, ಹೆಸರು ಇಲ್ಲದೇ ಯಾವುದೇ ಸರ್ಕಾರಿ ಅಧಿಕಾರಿ, ನೌಕರರ ಮೇಲೆ ಅನಾಮಧೇಯ ಪತ್ರದಲ್ಲಿ ದೂರು ಕಳುಹಿಸಿದರೆ ಪರಿಗಣನೆಗೆ ಅದು ಪರಿಗಣನೆಗೆ ಬರುವುದಿಲ್ಲ.

0 / 5. 0

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ನಿಮ್ಮ ಕಾಮೆಂಟ್ ಬರೆಯಿರಿ

advertisement