ಕಾನ್ಪುರದಲ್ಲಿ ಇಂದು ಮತ್ತೆ 30 ಮಂದಿಯಲ್ಲಿ ಝಿಕಾ ವೈರಸ್ ಸೋಂಕು ಪತ್ತೆ..!

ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ ಇಂದು (ನವೆಂಬರ್ 4) ಮತ್ತೆ 30 ಜನರಿಗೆ ಝಿಕಾ ವೈರಸ್​ ಪತ್ತೆ ಆಗಿದೆ. ಜಿಲ್ಲೆಯಲ್ಲಿ ಇದುವರೆಗೆ ಝಿಕಾ ವೈರಸ್​ ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆ ಆಗಿದೆ. ಬುಧವಾರ (ನವೆಂಬರ್ 3) ವಾಯುಪಡೆಯ ಆರು ಸಿಬ್ಬಂದಿಯೂ ಸೇರಿದಂತೆ ಜಿಲ್ಲೆಯ 25 ಮಂದಿಯಲ್ಲಿ ಝಿಕಾ ವೈರಸ್ ಸೋಂಕು ಪತ್ತೆಯಾಗಿತ್ತು.
ಝಿಕಾ ವೈರಸ್ ಸೋಂಕು ಸೊಳ್ಳೆಗಳಿಂದ ಹರಡುತ್ತದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಅ.23ರಂದು ಮೊದಲ ಬಾರಿಗೆ ವಾಯುಪಡೆ ಅಧಿಕಾರಿಯೊಬ್ಬರಲ್ಲಿ ಝೀಕಾ ಸೋಂಕು ಕಾಣಿಸಿಕೊಂಡಿತ್ತು. ಇದಾದ ನಂತರ ಕೇಂದ್ರ ಆರೋಗ್ಯ ಇಲಾಖೆಯು ಉನ್ನತ ಮಟ್ಟದ ತಂಡವನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿಕೊಟ್ಟಿತ್ತು.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಆಫ್ರಿಕನ್ ದೇಶಗಳಲ್ಲಿ ದಾಖಲಾದ ಝಿಕಾ ವೈರಸ್, ಗರ್ಭಧಾರಣೆಯ ಸಂಬಂಧಿತ ತೊಡಕುಗಳು ಮತ್ತು ವಯಸ್ಕರು ಮತ್ತು ಮಕ್ಕಳಲ್ಲಿ ನರವೈಜ್ಞಾನಿಕ ತೊಡಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಝಿಕಾ ವೈರಸ್ ಕಾಯಿಲೆಯ ತೀವ್ರತೆ ಕಾಲಾವಧಿ (ರೋಗಲಕ್ಷಣಗಳಿಗೆ ಒಡ್ಡಿಕೊಳ್ಳುವ ಸಮಯ) 3 ರಿಂದ 14 ದಿನಗಳು ಎಂದು ಅಂದಾಜಿಸಲಾಗಿದೆ.
ಝಿಕಾ ವೈರಸ್ ಸೋಂಕಿತ ಜನರಲ್ಲಿ ಹೆಚ್ಚಿನವರು ರೋಗಲಕ್ಷಣಗಳನ್ನು ಹೆಚ್ಚಾಗಿ ಕಂಡು ಬರುವುದಿಲ್ಲ ಎಂದು ಡಬ್ಲ್ಯುಎಚ್‌ಒ (WHO) ಹೇಳುತ್ತದೆ. ಜ್ವರ, ಕಾಂಜಂಕ್ಟಿವಿಟಿಸ್, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು ತಲೆನೋವು ಸೇರಿದಂತೆ ರೋಗಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಸಾಮಾನ್ಯವಾಗಿ 2 ರಿಂದ 7 ದಿನಗಳವರೆಗೆ ಇರುತ್ತದೆ ಎಂದು ಅದು ಹೇಳುತ್ತದೆ. ಝಿಕಾ ವೈರಸ್‌ಗೆ ಯಾವುದೇ ಚಿಕಿತ್ಸೆ ಲಭ್ಯವಿಲ್ಲ .ಆ ತಡೆಗಟ್ಟುವ ಕ್ರಮಗಳೆಂದರೆ ಹಗಲಿನಲ್ಲಿ ಮತ್ತು ಸಂಜೆಯ ಆರಂಭದಲ್ಲಿ ಸೊಳ್ಳೆ ಕಡಿತದಿಂದ ರಕ್ಷಣೆಯನ್ನು ಮಾಡಿಕೊಳ್ಳಬೇಕು. ಕೆಲವು ತಿಂಗಳುಗಳ ಹಿಂದೆ ಕೇರಳದಲ್ಲೂ ಓರ್ವ ವ್ಯಕ್ತಿಯಲ್ಲಿ ಝಿಕಾ ವೈರಸ್ ಸೋಂಕು ಪತ್ತೆಯಾಗಿತ್ತು.

ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement