ದೆಹಲಿಯಲ್ಲಿ ಇಬ್ಬರು ಡ್ರಗ್ ಪೆಡ್ಲರ್‌ ಗಳ ಬಂಧನ:18 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ

ನವದೆಹಲಿ: ಮಾದಕ ವಸ್ತುಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಸುಲ್ತಾನ್ ಪುರಿಯಲ್ಲಿ ದೆಹಲಿ ಪೋಲಿಸರು ಬಂಧಿಸಿದ್ದಾರೆ.
ದಾಳಿಯ ಸಮಯದಲ್ಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 18 ಕೋಟಿ ರೂ. ಮೌಲ್ಯದ 6 ಕೆಜಿ ಹೆರಾಯಿನ್ ಅನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಡ್ರಗ್ ಕಾರ್ಟೆಲ್ ಕಿಂಗ್ ಪಿನ್ ತೈಮೂರ್ ಖಾನ್ ಆಲಿಯಾಸ್ ಭೋಲಾ ಅವರ ಸಹಾಯಕ ಆಸಿಮ್ ಮತ್ತು ಸುಲ್ತಾನ್ ಪುರಿಯಲ್ಲಿ ಮಾದಕ ವಸ್ತು ಪೂರೈಕೆದಾರ ವರುಣ್ ಎಂದು ಗುರುತಿಸಲಾಗಿದೆ. ಇಬ್ಬರೂ ಪ್ರಮುಖ ಡ್ರಗ್ ಸಿಂಡಿಕೇಟ್ ಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.
ಆಪರೇಷನ್ ಸ್ಪೈಡರ್ ಅಡಿಯಲ್ಲಿ ದೆಹಲಿ ಪೊಲೀಸರು ವಿಶೇಷ ಮಾದಕ ದ್ರವ್ಯ ವಿರೋಧಿ ಜಾರಿ ಅಭಿಯಾನವನ್ನು ಪ್ರಾರಂಭಿಸಿದ್ದರು. ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದ ಮಾಹಿತಿ ಪಡೆದ ಅಧಿಕಾರಿಗಳಿಗೆ ಈ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳಾದ ಅಸೀಮ್ ಮತ್ತು ವರುಣ್ ಅವರನ್ನು ಬಂಧಿಸಿದ್ದಾರೆ.
ಆರೋಪಿಗಳು ಡ್ರಗ್ಸ್ ಉತ್ಪಾದಿಸಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಮನೆಯಲ್ಲಿಯೇ ಡ್ರಗ್ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗಿದೆ. ನಂತರ ಈ ಡ್ರಗ್ಸ್ ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಪಂಜಾಬ್ ಸೇರಿದಂತೆ ಭಾರತದಾದ್ಯಂತ ಸರಬರಾಜು ಮಾಡಲ್ಪಟ್ಟಿದೆ. ಪ್ರಸ್ತುತ, ನಾವು ಈ ಗ್ಯಾಂಗಿನ ಇತರ ಸದಸ್ಯರಿಗಾಗಿ ಹುಡುಕುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.
ಸುಮಾರು ಎರಡು ವಾರಗಳ ಹಿಂದೆ ದೆಹಲಿ ಪೊಲೀಸರ ಆ್ಯಂಟಿ ನಾರ್ಕೋಟಿಕ್ ಸೆಲ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2 ಕೋಟಿ ಮೌಲ್ಯದ 1 ಕೆಜಿ ಹೆರಾಯಿನ್‌ನೊಂದಿಗೆ ಇಬ್ಬರು ಆರೋಪಿಗಳನ್ನು ಬಂಧಿಸಿತ್ತು.
ಈ ಕಾರ್ಯಾಚರಣೆಯಲ್ಲಿಯೇ ಮೋಸ್ಟ್ ವಾಂಟೆಡ್ ಡ್ರಗ್ ದಂಧೆಕೋರ ತೈಮೂರ್ ಖಾನ್ ನನ್ನು ಸೀಲಂಪುರದಲ್ಲಿ ಬಂಧಿಸಲಾಯಿತು ಮತ್ತು ದೆಹಲಿ ಪೊಲೀಸರು ಆತನ ಬಂಧನಕ್ಕೆ 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿತ್ತು. ತೈಮೂರ್ ಎಂಬಿಎ ಪದವಿಗಾಗಿ ಕಾಲೇಜಿಗೆ ಸೇರಿದ್ದ ಆದರೆ, ಆರ್ಥಿಕ ಅಡಚಣೆಯಿಂದಾಗಿ ಆತ ಅಪರಾಧದ ಹಾದಿ ಹಿಡಿದು ಡ್ರಗ್ಸ್ ಸರಬರಾಜು ಮಾಡಲು ಆರಂಭಿಸಿದ್ದ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement