ಹಾವಿನೊಂದಿಗೆ ಸೆಣಸಾಡಿ ಕೊನೆಗೆ ಹಾವನ್ನೇ ಹೊತ್ತೊಯ್ದ ಇಲಿ…! ವೀಕ್ಷಿಸಿ

ಹಾವುಗಳು ಇಲಿಯನ್ನು ಹಿಡಿದು ತಿನ್ನುವುದನ್ನು ನೋಡುತ್ತೇವೆ, ಕೇಳುತ್ತೇವೆ. ಆದರೆ ಇಲಿಯೇ ಹಾವನ್ನು ಹೊತ್ತೊಯ್ಯುವುದನ್ನು ಕೇಳಿದ್ದೀರಾ.. ಬಹುತೇಕರು ನೋಡುವುದು ದೂರವಾಯಿತು, ಬಹುಶಃ ಕೇಳಿರಲಿಕ್ಕಿಲ್ಲ. ಆದರೆ ಹಾವಿನ ಜೊತೆ ಸೆಣಸಾಡಿದ ಇಲಿ ನಂತರ ಹಾವನ್ನೇ ಹೊತ್ತೊಯ್ದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ…!
ದೃಶ್ಯಗಳನ್ನು ನೋಡಿರುತ್ತಿರಾ ಆದರೆ ಇಲ್ಲಿ ಮಾತ್ರ ಇಲ್ಲಿ ಮಾತ್ರ ನೇರ ವಿರುದ್ಧ ಘಟನೆ ನಡೆದು ಇಲಿಯೊಂದು ಹಾವನ್ನೇ ಹಿಡಿದಿದೆ. ಈ ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುತ್ತೂರು ಸಮೀಪದ ಕಡಬ ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕಳಾರ ಎಂಬಲ್ಲಿ ಪುಟ್ಟ ಇಲಿಯೊಂದು ಹಾವಿನೊಂದಿಗೆ ಕಾದಾಡಿ ಕೊನೆಗೆ ಹಾವನ್ನೇ ಹಿಡಿದುಕೊಂಡು ಪೊದೆಯೊಳಗೆ ಹೋಗಿರುವುದನ್ನು ಮಂಗಳೂರು ಮಿರರ್‌.ಕಾಮ್‌ ವರದಿ ಮಾಡಿದೆ.
ಕಳಾರದ ಗಣೇಶ್ ಎಂಬವರ ದಿನಸಿ ಅಂಗಡಿಯ ಮುಂದೆ ಸಂಜೆ ಸುಮಾರು ಐದು ಗಂಟೆಗಳ ಸುಮಾರಿಗೆ ಸಣ್ಣ ಹಾವು ತನ್ನನ್ನು ಹಿಡಿಯಲು ಬಂದಾಗ ಸೆಣಸಾಡಿದ ಇಲಿ ಹಾವಿನ ಕೊನೆಗೆ ಹಾವನ್ನೇ ಹಿಡಿದುಕೊಂಡು ಪೊದೆಯೊಳಗಡೆ ಮರೆಯಾಗಿದೆ. ಗಣೇಶ್ ಅವರ ಅಂಗಡಿಯಲ್ಲಿದ್ದ ಗ್ರಾಹಕರೋರ್ವರು ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅದನ್ನು ಹಂಚಿಕೊಳ್ಳಲಾಗಿದೆ.

ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement